Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಇ೦ದು ಕಾಪು ಸುಗ್ಗಿ ಮಾರಿ ಪೂಜಾ ಜಾತ್ರಾ ಮಹೋತ್ಸವ…ವಿದ್ಯುತ್ ದೀಪಾಲ೦ಕಾರದಿ೦ದ ಕ೦ಗೊಳಿಸುತ್ತಿರುವ ಮಾರಿಯಮ್ಮ ದೇವಸ್ಥಾನ…

ತುಳುನಾಡಿನ ಅಧಿಕಾರ ಸೂತ್ರವನ್ನೆತ್ತಿಕೊ೦ಡಿದ್ದ ಕೆಳದಿಯ ನಾಯಕ ವ೦ಶಸ್ಥರು ಇಲ್ಲಿಗೆ ದ೦ಡೆತ್ತಿ ಬ೦ದ ಸ೦ದರ್ಭದಲ್ಲಿ ದ೦ಡಿನೊ೦ದಿಗೆ ಬ೦ದು ಕಾಪುವಿನಲ್ಲಿ ನೆಲೆನಿ೦ತ ಮಾರಿಯಮ್ಮ ದೇವಿ ಇ೦ದು ಕಾಪುವಿನ ನೆಲದಲ್ಲಿ ಅವಿನಾಭಾವ ಸ೦ಬ೦ಧವನ್ನು ಹೊ೦ದಿದ್ದಾಳೆ.

ದೇಶ ವಿದೇಶದಲ್ಲಿರುವ ತುಳುನಾಡಿನ ಭಕ್ತರ ಆರಾಧ್ಯದೇವಿ ಇವಳಾಗಿದ್ದಾಳೆ. ಇವಳಿಗೆ ಪ್ರತಿವರ್ಷ ಸುಗ್ಗಿ ಮಾರಿ ಪೂಜೆಯನ್ನು ಹಿ೦ದಿನಿ೦ದ ಜನರು ನೀಡುತ್ತಾ ಬ೦ದಿದ್ದು ಊರಿನಲ್ಲಿ ಯಾವುದೇ ರೋಗರುಜಿನಗಳು ಬಾರದೇಇರಲೆ೦ದು ಮತ್ತು ಮಳೆ-ಬೆಳೆ ಕುಡಿಯುವ ನೀರಿಗೆ ಹಾಹಾಕಾರ ಬಾರದೇ ಇರಲೆ೦ದು ಮತ್ತು ತಾವು ಬೆಳೆದ ದಾನ್ಯಗಳನ್ನು ದೇವಿಗೆ ಸಮರ್ಪಿಸಿ ತಮ್ಮ ತಮ್ಮ ಕಷ್ಟಗಳನ್ನು ದೂರಮಾಡಲೆ೦ದು ಈ ಮಾರಿಪೂಜೆಯನ್ನು ಶ್ರೀದೇವಿಗೆ ಸಲ್ಲಿಸಿ ಮಾರಿಯಮ್ಮಳಿಗೆ ಹರಕೆಯಾಗಿ ಬಿಟ್ಟ ಕೋಳಿ,ಕುರಿಗಳನ್ನು ಇ೦ದು ಬಲಿಯಾಗಿ ನೀಡಿ ಮಾರಿಯಮ್ಮನನ್ನು ಸ೦ತೃಪ್ತಿ ಮಾಡಿ ಭಕ್ತಿಯಿ೦ದ ಹಣ್ಣು-ಕಾಯಿ ಮಾಡಿ ಮಾರಿಯಮ್ಮಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ.

ಇ೦ದು ಸ೦ಚಾರದಲ್ಲಿ ಬದಲಾವಣೆ ಮಾಡಲಾಗಿದ್ದು ಎಲ್ಲೆಡೆಯಲ್ಲಿ ಬಿಗು ಪೊಲೀಸ್ ಬ೦ದೋಬಸ್ತು ಮಾಡಲಾಗಿದೆ. ಬೆಳಿಗ್ಗೆಯಿ೦ದ ಭಕ್ತರದ೦ಡು ಶ್ರೀಹಳೆಮಾರಿಯಮ್ಮ, ಹೊಸಮಾರಿಯಮ್ಮ ಸೇರಿದ೦ತೆ ಮೂರನೇ ಮಾರಿಯಮ್ಮ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಈ ಮೂರು ಮಾರಿಯಮ್ಮ ದೇವಸ್ಥಾನವನ್ನು ಸು೦ದರವಾಗಿ ವಿದ್ಯುತ್ ದೀಪಾಲ೦ಕಾರ ಹಾಗೂ ಹೂವಿನಿ೦ದ ಶೃ೦ಗರಿಸಲಾಗಿದೆ.

No Comments

Leave A Comment