Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಆಸ್ಟ್ರೇಲಿಯಾದಲ್ಲೂ ಜನಾಂಗೀಯ ದಾಳಿ; ಭಾರತ ಮೂಲದ ಚರ್ಚ್ ಪಾದ್ರಿಗೆ ಚಾಕು ಇರಿತ

ಮೆಲ್ಬೋರ್ನ್: ಅಮೆರಿಕ ದೇಶದ ಬಳಿಕ ಇದೀಗ ಆಸ್ಟ್ರೇಲಿಯಾದಲ್ಲೂ ಜನಾಂಗೀಯ ದಾಳಿ ಪ್ರಕರಣ ವರದಿಯಾಗಿದ್ದು, ಭಾರತೀಯ ಮೂಲದ ಕ್ಯಾಥೋಲಿಕ್ ಚರ್ಚ್ ಪಾದ್ರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಚರ್ಚ್ ನಲ್ಲಿ ಈ ದಾಳಿ ನಡೆದಿದ್ದು, ಭಾರತದ ಕೇರಳ ಮೂಲದ 48 ವರ್ಷದ ಕ್ಯಾಥೋಲಿಕ್ ಪಾದ್ರಿ ರೇವ್ ಟಾಮಿ ಕಲಥೂರ್ ಮ್ಯಾಥ್ಯೂ ಅವರ ಕುತ್ತಿಗೆ ಭಾಗಕ್ಕೆ ದುಷ್ಕರ್ಮಿ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಮೆಲ್ಬೋರ್ನ್ ಚರ್ಚ್ ನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾದ್ರಿ ರೇವ್ ಟಾಮಿ ಕಲಥೂರ್ ಮ್ಯಾಥ್ಯೂ ಸಭಿಕರನ್ನು ಉದ್ದೇಶಿಸಿ ಮಾತನಾಡಬೇಕಿತ್ತು.

ಅದಕ್ಕೂ ಮೊದಲೇ ಸುಮಾರು 72 ವರ್ಷದ ವ್ಯಕ್ತಿ ಅವರ ಮೇಲೆ ದಾಳಿ ಮಾಡಿದ್ದಾನೆ.ಪ್ರಸ್ತುತ ದುಷ್ಕರ್ಮಿಯನ್ನು ಮೆಲ್ಬೋರ್ನ್ ಪೊಲೀಸರು ವಶಕ್ಕೆ ಪಡೆದಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಜೂನ್ 13ರವರೆಗೂ ವ್ಯಕ್ತಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು, ಜೂನ್  13ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ಇನ್ನು ಚಾಕು ಇರಿತದಿಂದ ಗಾಯಗೊಂಡಿರುವ ಪಾದ್ರಿಗೆ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಸ್ತುತ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಇನ್ನು ಭಾರತೀಯ ಮೂಲಕ ಪಾದ್ರಿ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಮೆಲ್ಬೋರ್ನ್ ನಲ್ಲಿರು ಕ್ಯಾಥೋಲಿಕ್ ಧರ್ಮೀಯರು, ಸಹಿಲಸಾಧ್ಯ ಎಂದು ಘಟನೆಯನ್ನು ಖಂಡಿಸಿದ್ದಾರೆ.

ಈಗ್ಗೆ ಕೆಲ ದಿನಗಳ ಹಿಂದಷ್ಟೇ ಅಮೆರಿದಲ್ಲಿ ಭಾರತೀಯ ಮೂಲದ ವ್ಯಕ್ತಿಗಳ ಮೇಲೆ ದಾಳಿ ನಡೆದಿತ್ತು. ಈ ಘಟನೆಗಳು ಹಸಿರಾಗಿರುವಾಗಲೇ ಆಸ್ಚ್ರೇಲಿಯಾದಲ್ಲೂ ಇಂತಹ ಘಟನೆ ವರದಿಯಾಗಿರುವುದು ಅಲ್ಲಿ ನೆಲೆಸಿರುವ  ಭಾರತೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ.

No Comments

Leave A Comment