Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಮಣಿಪಾಲ: ಕೇರಳ ಉದ್ಯಮಿ ಅಪಹರಣ: 40 ಲಕ್ಷ ಚಿನ್ನ, 2.5 ಲಕ್ಷ ನಗದು ಲೂಟಿ

ಮಣಿಪಾಲ : ಕೇರಳದ ತೃಶ್ಶೂರು ಜಿಲ್ಲೆಯ ಚಿನ್ನಾಭರಣ ವ್ಯಾಪಾರಿ ದಿಲೀಪ್‌ ಎಂಬವರನ್ನು ಅಪರಿಚಿತ ಲೂಟಿಕೋರರು ಅಡ್ಡಗಟ್ಟಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 2.5 ಲಕ್ಷ ರೂ. ನಗದನ್ನು ದರೋಡೆಗೈದಿದ್ದಾರೆ.

ಉದ್ಯಮಿ ದಿಲೀಪ್‌ ಅವರು ತೃಶ್ಶೂರಿನಿಂದ ಮಣಿಪಾಲಕ್ಕೆ ಬಸ್ಸಿನಲ್ಲಿ ಬರುತ್ತಿದ್ದರು. ಮಣಿಪಾಲದಲ್ಲಿ ಅವರು ಬಸ್ಸಿನಿಂದ ಇಳಿದೊಡನೆಯೇ ಅವರನ್ನು ದರೋಡೆಕೋರರು ಅಪಹರಿಸಿ ಕಾರಿನಲ್ಲಿ ಒಯ್ದು ಅವರ ಬಳಿ ಇದ್ದ  ನಗ – ನಗದನ್ನು ಲೂಟಿ ಮಾಡಿ ಬಳಿಕ ಅವರನ್ನು ಪಡುಬಿದ್ರಿಯಲ್ಲಿ ಕಾರಿನಿಂದ ಹೊರದೂಡಿ ಪರಾರಿಯಾಗಿದ್ದಾರೆ.

ಪ್ರಕರಣದ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

 

No Comments

Leave A Comment