Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ತ್ರಿವಳಿ ತಲಾಖ್: ಒಂದು ಮಿಲಿಯನ್ ಭಾರತೀಯ ಮುಸ್ಲಿಂ ಮಹಿಳೆಯರಿಂದ ಅರ್ಜಿಗೆ ಸಹಿ

ನವದೆಹಲಿ: ತ್ರಿವಳಿ ತಲಾಖ್ ವಿರುದ್ಧದ ಚಳುವಳಿ ತೀವ್ರಗೊಳ್ಳುತ್ತಿದ್ದು, ತಲಾಖ್ ನ್ನು ಅಂತ್ಯಗೊಳಿಸುವ ಅರ್ಜಿಗೆ ಸಹಿ ಹಾಕಿರುವ ಭಾರತೀಯ ಮುಸ್ಲಿಂ ಮಹಿಳೆಯರ ಸಂಖ್ಯೆ ಒಂದು ಮಿಲಿಯನ್ ದಾಟಿದೆ.

ಮುಸ್ಲಿಂ ರಾಷ್ಟ್ರೀಯ ಮಂಚ್ ಗೆ (ಎಂಆರ್ ಎಂ) ಅರ್ಜಿಯನ್ನು ಪ್ರಾರಂಭಿಸಿದ್ದು, ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೂ ತ್ರಿವಳಿ ತಲಾಖ್ ವಿರುದ್ಧದ ಅಭಿಯಾನಕ್ಕೆ ದೊರೆತ ಸಕಾರಾತ್ಮಕ ಸ್ಪಂದನೆಗೂ ಸಂಬಂಧವಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸುವಂತೆ ಈಗಾಗಲೇ ಮುಸ್ಲಿಂ ಸಮುದಾಯದ ಹಲವು ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ತ್ರಿವಳಿ ತಲಾಖ್ ಸೇರಿದಂತೆ ಎಲ್ಲಾ ರೀತಿಯ ಲಿಂಗ ತಾರತಮ್ಯಗಳನ್ನು  ವಿರೋಧಿಸುವುದಾಗಿ ಕೇಂದ್ರ ಸರ್ಕಾರವೂ ಸುಪ್ರೀಂ ಕೋರ್ಟ್ ಗೆ ಹೇಳಿದೆ.

No Comments

Leave A Comment