Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಹೊತ್ತಿ ಉರಿದ ಬಿಎಂಡಬ್ಲ್ಯೂಕಾರು:ರೇಸಿಂಗ್ ಕಾರು ಚಾಲಕ ಅಶ್ವಿನ್ ಸುಂದರ್ ಅಪಘಾತದಲ್ಲಿ ದುರ್ಮರಣ

ಚೆನ್ನೈ: ಕಾರ್ ರೇಸಿಂಗ್‍ನಲ್ಲಿ ಖ್ಯಾತರಾಗಿದ್ದ ಯುವ ಪ್ರತಿಭೆ ಅಶ್ವಿನ್ ಸುಂದರ್ (27) ಮತ್ತು ಅವರ ಪತ್ನಿ ಇಂದು ಮುಂಜಾನೆ  ನಡೆದ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಅಶ್ವಿನ್ ಅವರು ಚಾಲನೆ ಮಾಡುತ್ತಿದ್ದ ಬಿಎಂಡಬ್ಲ್ಯೂ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿದೆ. ಘಟನಾ ಸ್ಥಳದಲ್ಲಿಯೇ ಅಶ್ವಿನ್ ಮತ್ತು ಅವರ ಪತ್ನಿ ನಿವೇದಿತ ಸಜೀವ ದಹನವಾಗಿದ್ದಾರೆ.

ಚೆನ್ನೈ ಮರೀನಾ ಬೀಚ್ ಬಳಿ ಪಟ್ಟಿಣಂಪ್ಪಕ್ಕಂ ಎಂಬಲ್ಲಿ ಇಂದು ಮುಂಜಾನೆ 3.30 ಹೊತ್ತಿಗೆ ಈ ಅಪಘಾತ ಸಂಭವಿಸಿದೆ, ಅಶ್ವಿನ್ ಚಾಲನೆ ಮಾಡುತ್ತಿದ್ದ ಕಾರು ಅತಿ ವೇಗದಲ್ಲಿ ಚಲಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಚೆನ್ನೈ ಲೀಲಾ ಪ್ಯಾಲೇಸ್‍ಗೆ ಹಿಂತಿರುಗುವ ಹೊತ್ತು ಈ ಅಪಘಾತ ಸಂಭವಿಸಿದ್ದು, ಕಾರು ಅಪಘಾತವನ್ನು ನೋಡಿದ ಕೆಲವು ಜನರು ದೃಶ್ಯವನ್ನು ರೆಕಾರ್ಡ್ ಮಾಡಿದರೆ, ಇನ್ನೊಬ್ಬ ವ್ಯಕ್ತಿ ಆ ದೃಶ್ಯವನ್ನು ಫೇಸ್‍ಬುಕ್ ಲೈವ್‍ ಪ್ರಸಾರ ಮಾಡಿದ್ದಾರೆ.

14ರ ಹರೆಯದಲ್ಲಿ ರೇಸಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ್ದ ಅಶ್ವಿನ್ 2008ರಲ್ಲಿ ಜರ್ಮನ್ ಮೂಲದ ಮಾ ಕಾನ್ ಮೋಟರ್‍ ಸ್ಪೋರ್ಟ್ ರೇಸಿಂಗ್ ಟೀಂ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದರು

 

No Comments

Leave A Comment