Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

200 ಮೀಟರ್‌ ಆಳದ ಕಂದಕಕ್ಕೆ ಜೀಪ್‌ ಉರುಳಿ 8 ಮಂದಿ ಸ್ಥಳದಲ್ಲೇ ಸಾವು

ಡೆಹರಾಡೂನ್‌ : ಉತ್ತರಾಖಂಡದ ಆಲ್‌ಮೋರಾ ಜಿಲ್ಲೆಯಲ್ಲಿ ಜೀಪ್‌ ಒಂದು ಚಾಲಕನ ನಿಯಂತ್ರಣ ತಪ್ಪಿ 200 ಮೀಟರ್‌ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮವಾಗಿ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟು ಇತರ 12 ಮಂದಿ ಗಾಯಗೊಂಡರೆಂದು  ಪೊಲೀಸರು ತಿಳಿಸಿದ್ದಾರೆ.

ಭತ್ರೋಜ್‌ಖಾನ್‌ – ರಾಮನಗರ ರಸ್ತೆಯಲ್ಲಿನ ಭವುನ್‌ಖಾಲ್‌ ಎಂಬಲ್ಲಿ ನಿನ್ನೆ ತಡರಾತ್ರಿ ಈ ಭೀಕರ ಅವಘಡ ಸಂಭವಿಸಿತೆಂದು ಸಾಲ್ಟ್ ಪೊಲೀಸ್‌ ಸ್ಟೇಶನ್‌ ಪ್ರಭಾರಾಧಿಕಾರಿ ಠಾಕೂರ್‌ ಸಿಂಗ್‌ ತಿಳಿಸಿದ್ದಾರೆ.

ಐವರು ಮಹಿಳೆಯರು ಸೇರಿದಂತೆ ಎಂಟು ಮಂದಿ ಸ್ಥಳದಲ್ಲೇ ಸಾವಪ್ಪಿದರು. ಗಾಯಗೊಂಡ 12 ಮಂದಿಯನ್ನು ರಾಮನಗರದಲ್ಲಿನ ಆಸ್ಪತ್ರೆಗೆ ಸೇರಿಸಲಾಗಿದೆ. ಜೀವಪಿನಲ್ಲಿ ಒಟ್ಟು 19 ಮಂದಿ ಪ್ರಯಾಣಿಸುತ್ತಿದ್ದರು ಎಂದು ಠಾಕೂರ್‌ ಸಿಂಗ್‌ ತಿಳಿಸಿದ್ದಾರೆ.

No Comments

Leave A Comment