Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಲಿಂಗಸೂರು: ಮಲಗಿದ್ದಲ್ಲೇ ಅನುಮಾನಾಸ್ಪದವಾಗಿ ಶವವಾದ ಐವರು ಕಾರ್ಮಿಕರು

ಲಿಂಗಸೂರು: ಪಟ್ಟಣದಲ್ಲಿ  ಮದುವೆ ಸಮಾರಂಭಕ್ಕೆ ಶಾಮಿಯಾನ ಹಾಕಲು ಬಂದಿದ್ದ  ಐವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಭೀಕರ ದುರಂತ ಶುಕ್ರವಾರ ನಡೆದಿದೆ.

ರಾತ್ರಿ ಕೊಠಡಿಯೊಂದರಲ್ಲಿ ಮಲಗಿದ್ದ ವೇಳೆ ಕರೆಂಟ್‌ ಕೈಕೊಟ್ಟಿದ್ದು ಈ ವೇಳೆ ಜನರೇಟರ್‌ ಆನ್‌ ಮಾಡಿ ಮಲಗಿದ್ದರು ಎನ್ನಲಾಗಿದೆ. ರಾತ್ರಿಯಿಡೀ ಜನರೇಟರ್‌ನ ಹೊಗೆ ಸೇವಿಸಿ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಮೃತಪಟ್ಟವರು ಕರಡೆಕಲ್‌ ಗ್ರಾಮದ ಶಿಕುಮಾರ್‌(22),ಹಾಜಪ್ಪ(17),ಮೌಲಾಲಿ(18),ಮೌಲಪ್ಪ(20), ಸುರೇಶ್‌ (21) ಎಂದು ತಿಳಿದು ಬಂದಿದೆ. ನಾಲ್ವರು ಕೊಣೆಯಲ್ಲೇ ಶವವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ  ಸುರೇಶ್‌ ನನ್ನು ಲಿಂಗಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ.

ಲಿಂಗಸೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment