Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಚಿತ್ರದುರ್ಗದಲ್ಲಿ ಆಂಬ್ಯುಲೆನ್ಸ್‌ಗೆ ರೈಲು ಡಿಕ್ಕಿ: ನಾಲ್ವರ ದಾರುಣ ಸಾವು

ಚಿತ್ರದುರ್ಗ: ತಡೆ ರಹಿತ ಲೆವೆಲ್ ಕ್ರಾಸಿಂಗ್ ಮಾಡುವ ವೇಳೆಯಲ್ಲಿ ಆಂಬ್ಯುಲೆನ್ಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ರೈಲ್ವೆ ಗೇಟ್ ಬಳಿ ನಡೆದಿದೆ.

ಚಂದ್ರಕಲಾ(33), ಸಾವಿತ್ರಮ್ಮ(55), ಶಂಕರಮ್ಮ(60), ಮತ್ತು ಕದಿರಮ್ಮ(60) ಮೃತ ದುರ್ದೈವಿಗಳು. ಆದರೆ ಘಟನೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿದ್ದ 2 ತಿಂಗಳ ಮಗು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದೆ.ಗಂಗಮ್ಮ ಮತ್ತು ಕದಿರಮ್ಮ 2 ತಿಂಗಳ ಮಗುವನ್ನು ಬೇಡರೆಡ್ಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸುವ ವೇಳೆ ಅವಘಡ ಸಂಭವಿಸಿದೆ.

ಮದ್ಯದಾರಿಯಲ್ಲಿ ತಳುಕು ಗ್ರಾಮಕ್ಕೆ ತೆರಳುವ ಸಲುವಾಗಿ ಚಂದ್ರಕಲಾ, ಸಾವಿತ್ರಮ್ಮ, ಮತ್ತು ಶಂಕರಮ್ಮ ಆ್ಯಂಬುಲೆನ್ಸ ಹತ್ತಿದ್ದರು.ತರಾತುರಿಯಲ್ಲಿ ಹಳಿ ದಾಟಲು ಆಂಬ್ಯುಲೆನ್ಸ್ ಚಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ.

ಇನ್ನು ಆಂಬ್ಯುಲೆನ್ಸ್ ಚಾಲಕ ಹಾಗೂ ನಿರ್ವಾಹಕರಿಗೆ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ತನಿಖೆ ಮುದುವರಿಸಿದ್ದಾರೆ.

No Comments

Leave A Comment