Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಅಲೆವೂರು ಕರ್ವಾಲದಲ್ಲಿ ಪ್ರಭು ಕುಟುಂಬದ ನಾಗಮಂಡಲ ಸಂಪನ್ನ…

ಉಡುಪಿ: ಅಲೆವೂರಿನ ಕರ್ವಾಲದಲ್ಲಿ ಅನಂತರಾಮ ಪ್ರಭು ಅವರ ಕುಟುಂಬದ ನಾಗಮೂಲಾಸ್ಥಾನದಲ್ಲಿ ಬುಧವಾರದಂದು ಚೇಂಪಿ ರಾಮಚಂದ್ರ ಅನಂತ ಭಟ್ ಇವರ ಮಾರ್ಗದರ್ಶನದಲ್ಲಿ ನಾಗಮಂಡಲ ಕಾರ್ಯಕ್ರಮ ಜರಗಿತು.

ನಾಗದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ನಾಗಾಭಿಷೇಕ, ಆಶ್ಲೇಷಾಬಲಿ, ಸುವಾಸಿನಿ ಪೂಜೆ, ಬ್ರಾಹ್ಮಣ ವಟುಆರಾಧನೆ, ಪಲ್ಲಪೂಜೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ಸಂಜೆ ಉಡುಪಿಯ ಶ್ರೀ ವೆಂಕಟೇಶ ಯುವಕವೃಂದದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ತದನಂತರ ನಾಗಬನದಲ್ಲಿ ಹಾಲಿಟ್ಟು ಸೇವೆ ನಡೆಸಿಕೊಟ್ಟರು. ಅನಂತರ ರಾತ್ರಿ ನಾಗಮಂಡಲದಲ್ಲಿ ನಾಗಪಾತ್ರಿಯೊಂದಿಗೆ ಬಾಲಕೃಷ್ಣ ವೈದ್ಯ ಹಾಗೂ ನಟರಾಜ ವೈದ್ಯ ಇವರು ಡಮರುಗ ಸೇವೆಯನ್ನು ನಡೆಸಿದರು.
ಅರ್ಚಕರಾದ ಆನಂದ ಭಟ್ ಕುಂದಾಪುರ, ಕಾಶಿನಾಥ್ ಭಟ್ ಕಲ್ಯಾಣಪುರ, ರಮೇಶ ಭಟ್,
ಮತ್ತು ಅಲೆವೂರು ಪ್ರಭು ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೆರದ ಭಕ್ತರಿಗೆ ಪ್ರಸಾದ ವಿತರಣೆ ನಡೆಂುತು.

No Comments

Leave A Comment