Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ರಾಮನಗರ:ಅರಣ್ಯ ರಕ್ಷಕರ ಗುಂಡಿಗೆ ಬೇಟೆ ನಿರತ ಯುವಕ ಬಲಿ

ಕನಕಪುರ : ಇಲ್ಲಿನ ಉಯ್ಯಂಬಳ್ಳಿ  ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬಂದಿಗಳು ಹಾರಿಸಿದ ಗುಂಡಿಗೆ ಬೇಟೆ ನಿರತ ಯುವಕನೊಬ್ಬ ಬಲಿಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ದೊಡ್ಡಾಲಹಳ್ಳಿ ನಿವಾಸಿ ಗುರು (24 )ಬಲಿಯಾದ ಯುವಕ ಎಂದು ತಿಳಿದು ಬಂದಿದೆ. ಗುರು ನಾಲ್ವರು ಸ್ನೇಹಿತರೊಂದಿಗೆ ಮಾರಕಾಸ್ತ್ರಗಳ ಸಮೇತ ಬೇಟೆಗೆ ತೆರಳಿದ್ದ ಎಂದು ವರದಿಯಾಗಿದೆ.

ಗುಂಡು ಗುರು ಎದೆಗೆ ತಗುಲಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಉಳಿದ ಮೂವರು ಘಟನೆ ನಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ.

ಅರಣ್ಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment