Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಶ್ರದ್ಧೆ , ನಂಬಿಕೆಯ ಪರಂಪರೆ ಗೌಡ ಸಾರಸ್ವತ ಸಮಾಜದ್ದು

ಮೂಲ್ಕಿ: ಗುರುವಿನ ಮಾರ್ಗ ದರ್ಶನ, ಸನ್ಮಾರ್ಗದ ಸತ್‌ಚಿಂತನೆಗಳ ಮೂಲಕ ದೇವರ ಸಾಕ್ಷಾತ್ಕಾರದ ಬಗ್ಗೆ ನಂಬಿಕೆ ಮತ್ತು ಶ್ರದ್ಧೆಗೆ ಗೌಡ ಸಾರಸ್ವತ ಸಮಾಜ ಅತ್ಯಂತ ಶ್ರೇಷ್ಠ ಪರಂಪರೆ ಹೊಂದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರು ಹೇಳಿದರು.

ಮೂಲ್ಕಿಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಲಭೈರವ ಮೂಲಮದ್ರಾ ಜೀರ್ಣೋದ್ಧಾರ ಮಹೋತ್ಸವದ ಹಿನ್ನೆಲೆಯಲ್ಲಿ ಬುಧವಾರ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ದೇಗುಲಕ್ಕೆ ಭೇಟಿ ನೀಡಿ ಜಿಎಸ್‌ಬಿ ಸಮಾಜವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿ.ಎಸ್‌.ಬಿ. ಸಮಾಜ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ನಡುವೆ ಇರುವ ಅವಿನಾಭಾವ ಸಂಬಂಧ ನಿರಂತರ ಮುಂದುವರಿಯಲು ಈ ಸಮಾಜದ ಜನರಲ್ಲಿ ಇರುವ ಪ್ರಾಮಾಣಿಕತೆ ಮತ್ತು ನ್ಯಾಯನಿಷ್ಠೆ  ಕಾರಣ. ಧರ್ಮಸ್ಥಳದ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇದೆ. ಮೂಲ್ಕಿ ವೆಂಕಟರಮಣ ದೇಗುಲದಲ್ಲಿ ಭಕ್ತರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಲ್ಲಿಸಿದ ಕಾಣಿಕೆಯನ್ನು ಸುರಕ್ಷೆಯಿಂದ ಸಂಗ್ರಹಿಸಿ ಸಲ್ಲಿಸಲಾಗುತ್ತಿದೆ.

ಇದು ಈ ದೇಗುಲದ ಆಡಳಿತದ ಕಾರ್ಯ ವೈಖರಿಗೆ ಒಂದು ಉತ್ತಮ ಉದಾಹರಣೆ ಎಂದು ಡಾ| ಹೆಗ್ಗಡೆ ಅವರು ಹೇಳಿದರು. ದೇಗುಲದ ಅರ್ಚಕ ಪದ್ಮನಾಭ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕಾಲಭೈರವ ಮೂಲ ಮುದ್ರಾ ಬಗ್ಗೆ ಮಾಹಿತಿ ನೀಡಿದರು. ಡಾ| ವೀರೇಂದ್ರ ಹೆಗ್ಗಡೆ ಅವರನ್ನು ದೇಗುಲದ ವತಿಯಿಂದ ದರ್ಶನ ಪಾತ್ರಿಗಳಾದ ವಸಂತ ನಾಯಕ್‌ ಫಲಿಮಾರ್ಕರ್‌ ಅವರು ಸಮ್ಮಾನಿಸಿ, ಗೌರವಿಸಿದರು.

ಮೊಕ್ತೇಸರರಾದ ಯು. ವೇದವ್ಯಾಸ ಶೆಣೈ, ಕೆ.ಎನ್‌.  ಶೆಣೈ, ದೇವಣ್ಣ  ನಾಯಕ್‌, ಬಾಬುರಾಯ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ದೇಗುಲದ ಮೊಕ್ತೇಸರ ಎಂ. ಅತುಲ್‌ ಕುಡ್ವಾ ಅವರು ಸ್ವಾಗತಿಸಿದರು.

No Comments

Leave A Comment