Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಮೋದಿ, ಯಡಿಯೂರಪ್ಪ ಮುಕ್ತ ಭಾರತ ಗುರಿ:ವಿ.ಎಸ್‌. ಉಗ್ರಪ್ಪ

ಸುರತ್ಕಲ್‌: ನರೇಂದ್ರ ಮೋದಿ, ಅಮಿತ್‌ ಶಾ ಅವರಂತಹ ಸಾವಿರ ಮಂದಿ ಬಂದರೂ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಸಾಧ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ ಎಂಬುದನ್ನು ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಹಾಗೂ ಯಡಿಯೂರಪ್ಪ ಮುಕ್ತ ಆಡಳಿತ ಹೊಂದುವುದು ಕಾಂಗ್ರೆಸ್‌ನ ಗುರಿಯಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಹೇಳಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಸುರತ್ಕಲ್‌ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಸುರತ್ಕಲ್‌ನಲ್ಲಿ ಮಂಗಳವಾರ ಆಯೋಜಿಸಲಾದ ಕಾಂಗ್ರೆಸ್‌ ನಡಿಗೆ ಸುರಾಜ್ಯದ ಕಡೆಗೆ ಹಾಗೂ ಜನವೇದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾರತಮ್ಯ ನೀತಿ
ರಾಜ್ಯದ 160 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಬಿಹಾರಕ್ಕೆ ಲಕ್ಷ ಕೋಟಿ ರೂ. ಘೋಷಿಸಿದ ಮೋದಿ ಅವರು ರಾಜ್ಯಕ್ಕೆ ಕೇವಲ 1,500 ಕೋ.ರೂ. ನೀಡಿ ತಾರತಮ್ಯ ನೀತಿಯನ್ನು ಬಹಿರಂಗಗೊಳಿಸಿದ್ದಾರೆ. ಆದರೂ ರಾಜ್ಯ ಸರಕಾರ ತನ್ನ ಸ್ವ ಸಾಮರ್ಥ್ಯದಿಂದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಯಶಸ್ವಿಯಾಗಿದೆ ಎಂದರು.

ಕನಸು ನನಸಾಗದು
ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪಧಿದಲ್ಲಿ ಜೈಲು ಸೇರಿ ಬಂದ ಬಿ.ಎಸ್‌. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಜನಪರ ಕಾಳಜಿಯುಳ್ಳ ಸಿದ್ದರಾಮಯ್ಯ ಸರಕಾರದ ವಿರುದ್ಧ ದಾಖಲೆರಹಿತ ಆರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪ ಕೇವಲ ಒಂದೆರಡು ಕೇಸುಗಳಲ್ಲಿ ಖುಲಾಸೆಗೊಂಡರೂ ಇನ್ನೂ ಹತ್ತಿಪ್ಪತ್ತು ಕೇಸುಗಳು ತನಿಖಾ ಹಂತದಲ್ಲಿವೆ. ಹೀಗಾಗಿ ಯಡಿಯೂರಪ್ಪ ಆಡಳಿತದ ಕನಸು ನನಸಾಗದು. ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆ ಆಡಳಿತಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಅತ್ಯುತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಾಲಾ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಯೋಜನೆ ಜಾರಿಗೊಳಿಸುತ್ತಿದೆ. ರಾಜ್ಯದಲ್ಲಿ ಸೌಹಾರ್ದ ಕಾಪಾಡುವಲ್ಲಿ ಶ್ರಮ ವಹಿಸಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಜನರ ವಿಶ್ವಾಸವನ್ನು ಗಳಿಸಿದೆ. ಕಾರ್ಯಕರ್ತರು ಸರಕಾರದ ಸಾಧನೆಯನ್ನು ಜನತೆಗೆ ಪರಿಣಾಮಕಾರಿಯಾಗಿ ಮುಟ್ಟಿಸಿದಾಗ ನಮ್ಮ ಶ್ರಮ ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ ಎಂದರು.

ನೈತಿಕ ಬಲ ವೃದ್ಧಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಮೊದಿನ್‌ ಬಾವಾ ಪ್ರಸ್ತಾವನೆಗೈದು, ಪಕ್ಷದ ಬಲವರ್ಧನೆಗೆ ಹಾಗೂ ಕೇಂದ್ರ ಸರಕಾರದ ಜನವಿರೋಧಿ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಲು ಪಕ್ಷ ಈ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರಿಗೆ ಈ ಸಮಾವೇಶದಿಂದ ನೈತಿಕ ಬಲ ಹೆಚ್ಚಲಿದ್ದು ಮುಂದಿನ ಚುನಾವಣೆಗೆ ಪರಿಣಾಮಕಾರಿಯಾಗಿ ನಾವು ತಯಾರಾಗಲಿದ್ದೇವೆ ಎಂದರು.

ಅನಿವಾಸಿ ಭಾರತೀಯ ಸಮಿತಿಯ ಡಾ| ಆರತಿಕೃಷ್ಣ, ಮಹಿಳಾ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷೆ ಡಾ| ನಾಗಲಕ್ಷ್ಮೀ ಅವರು ವಿಶೇಷ ಉಪನ್ಯಾಸ ನೀಡಿದರು.

ಸಚಿವ ಯು.ಟಿ. ಖಾದರ್‌, ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕರಾದ ಅಭಯಚಂದ್ರ ಜೈನ್‌, ಜೆ.ಆರ್‌. ಲೋಬೋ, ಮೇಯರ್‌ ಕವಿತಾ ಸನಿಲ್‌, ಉಪ ಮೇಯರ್‌ ರಜನೀಶ್‌, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಗೇರು ಅಭಿವೃದ್ಧಿ ನಿಗಮದ ಖಾದರ್‌, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ , ಅಲ್ಪಸಂಖ್ಯಾಕ ವಿಭಾಗದ ಮುಖಂಡ ಯು.ಕೆ. ಮೋನು, ಉಸ್ತುವಾರಿ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಪೃಥ್ವಿರಾಜ್‌ ಕೆ., ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಮಾಜಿ ಮೇಯರ್‌ ಹರಿನಾಥ್‌, ಶಶಿಧರ ಹೆಗ್ಡೆ ಎಂ., ಮುಡಾ ಸದಸ್ಯ ಕೇಶವ ಸನಿಲ್‌, ಕೋಡಿಜಾಲ್‌ ಇಬ್ರಾಹಿಂ, ಮಿಥುನ್‌ ರೈ, ಮಹಮ್ಮದ್‌ ಆಲಿ, ಮುಖಂಡರಾದ ಸಾಹುಲ್‌, ಸೀಮಾ ಡಿ’ಸೋಜಾ, ಶಕುಂತಳಾ ಕಾಮತ್‌, ಗಿರೀಶ್‌ ಆಳ್ವ, ಗಣೇಶ್‌ ಪೂಜಾರಿ, ಉತ್ತಮ್‌ ಆಳ್ವ, ಮಹಮ್ಮದ್‌ ಅಲಿ ಮತ್ತಿತರರು ವೇದಿಕೆಯಲ್ಲಿದ್ದರು.

ಹುಸೈನ್‌ ಕಾಟಿಪಳ್ಳ ಮತ್ತು ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಚಿತ್ರಾಪುರ ವಂದಿಸಿದರು.

ನೋಟು ಅಪಮೌಲ್ಯ: ವಿಪಕ್ಷಗಳಿಗೆ ಸಮಸ್ಯೆ
ಪ್ರಧಾನಿ ನರೇಂದ್ರ ಮೋದಿ ಅವರು ಫ್ಯಾಸಿಸ್ಟ್‌ ಮಾದರಿಯ ಆಡಳಿತ ನಡೆಸುತ್ತಿದ್ದು ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಬಿಜೆಪಿ ಸಮಯ ಸಾಧಕತನ ತೋರುತ್ತಿದೆ. ಜನಪರ ಯೋಜನೆ ಜಾರಿ ಮಾಡುತ್ತೇವೆ, ಭ್ರಷ್ಟಾಚಾರದ ಹಣ ಹಿಂದೆ ತರುತ್ತೇವೆ ಎಂದೆಲ್ಲ ವಾಗ್ಧಾನ ಮಾಡಿದ್ದ ಮೋದಿ ಇಂದು ಆಡಿದ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಪಂಚ ರಾಜ್ಯ ಚುನಾವಣೆಯಲ್ಲಿ ಇತರ ಪಕ್ಷಗಳಿಗೆ ಚುನಾವಣೆ ಎದುರಿಸಲು ಅಸಾಧ್ಯವಾಗುವಂತೆ ಮಾಡಲು ನೋಟು ಅಪಮೌಲ್ಯಗೊಳಿಸಿದ್ದಾರೆ ಎಂದು ಆರೋಪಿಸಿದರು.

No Comments

Leave A Comment