Log In
BREAKING NEWS >
ಚು೦...ಚು೦ ಚಳಿಯಲ್ಲಿ ಬೃಹತ್ ಜನಸ್ತೋಮದ ನಡುವೆ ಪಲಿಮಾರು ಮಠಾಧೀಶರ ದ್ವಿತೀಯ ಪರ್ಯಾಯದ ಭವ್ಯ ಮೆರಣಿಗೆ...

ರಾಜ್ಯ ಬಜೆಟ್ 2017- ಮೀನುಗಾರಿಕೆ: ‘ಮತ್ಸ್ಯಾಶ್ರಯ ಯೋಜನೆ’ ಅಡಿ ೩೦೦೦ ಫಲಾನುಭವಿಗಳ ಆಯ್ಕೆ

ಬೆಂಗಳೂರು: ಮಲ್ಪೆ ಮತ್ತು ಮಂಗಳೂರು ಮೀನುಗಾರಿಕೆ ಬಂದರುಗಳಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ ೭೫ ಮೀ. ಉದ್ದದವರೆಗೆ ಜಟ್ಟಿ ವಿಸ್ತರಣೆ.

* “ಮತ್ಸ್ಯ ಕೃಷಿ ಆಶಾ ಕಿರಣ” ಯೋಜನೆಯಡಿ ಪ್ರಮುಖ ಕೆರೆಗಳ ೨,೫೦೦ ಹೆಕ್ಟೆರ್ ಪ್ರದೇಶದಲ್ಲಿ ಹೆಕ್ಟೆರ್‌ಗೆ ೪,೦೦೦ ಬಲಿತ ಮೀನುಮರಿ ಹಾಗೂ ೨ ಟನ್ ಕೃತಕ ಆಹಾರ ಖರೀದಿಗೆ ಘಟಕ ವೆಚ್ಚದ ಶೇ.೫೦ರಷ್ಟು ಹಾಗೂ ಗರಿಷ್ಟ ೨೭,೦೦೦ ರೂ. ನೀಡಲು ಕ್ರಮ – ೬.೭೫ ಕೋಟಿ ರೂ.

*  ಕೃಷಿಕರಿಗೆ ಅವರ ಜಮೀನುಗಳಲ್ಲಿ ಕೊಳ ನಿರ್ಮಿಸಿ ಸಾಂದ್ರೀಕೃತ ಮೀನು ಕೃಷಿ ಕೈಗೊಳ್ಳಲು ಉತ್ತೇಜನ. ಹೂಡಿಕೆ ವೆಚ್ಚ ಸೇರಿದಂತೆ ಮೀನು ಕೊಳ ನಿರ್ಮಾಣದ ಘಟಕ ವೆಚ್ಚ ೮.೫೦ ಲಕ್ಷ ರೂ. ಹಾಗೂ ಗರಿಷ್ಠ ೪.೨೫ ಲಕ್ಷ ರೂ.ಗೆ ಒಳಪಟ್ಟು ಶೇ.೫೦ ರಷ್ಟು ಸಹಾಯಧನ.

*  ಮೀನುಗಾರರ ಸಹಕಾರ ಸಂಘಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಕನಿಷ್ಠ  ೫೦೦ ಚದರಡಿಯ ಮೀನು ಸಂಗ್ರಹಣೆ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಶೇ. ೭೫ ರಷ್ಟು  ಸಹಾಯಧನ. ಘಟಕ ವೆಚ್ಚ ೧೦ ಲಕ್ಷ ರೂ.; ಪ್ರಸಕ್ತ ಸಾಲಿನಲ್ಲಿ ೨೦ ಕಟ್ಟಡಗಳ ನಿರ್ಮಾಣ.

*  ಕಡಲ ತೀರದ ೩ ಜಿಲ್ಲೆಗಳಲ್ಲಿ ೨೦೦ ಮಂಜುಗಡ್ಡೆ ಸ್ಥಾವರಗಳಿಗೆ ಹಾಗೂ ೩೫ ಶೈತ್ಯಾಗಾರಗಳಿಗೆ ವಿದ್ಯುಚ್ಛಕ್ತಿ ಮೇಲೆ ನೀಡುವ ಸಹಾಯಧನ ಪ್ರತಿ ಯುನಿಟ್‌ಗೆ ೧.೭೫ ರೂ. ಗಳಿಗೆ ಹೆಚ್ಚಳ ಹಾಗೂ ಪ್ರತಿ ವರ್ಷ ಪ್ರತಿ ಸ್ಥಾವರಕ್ಕೆ ಇರುವ ಮಿತಿ ೩.೫೦ ಲಕ್ಷ ರೂ.ಗಳಿಗೆ ಹೆಚ್ಚಳ.- ೬ ಕೋಟಿ ರೂ.
* “ಮತ್ಸ್ಯಾಶ್ರಯ ಯೋಜನೆ” ಅಡಿ ೩೦೦೦ ಫಲಾನುಭವಿಗಳ ಆಯ್ಕೆ.

* ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುದಾನ

No Comments

Leave A Comment