Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕಂಬಳ ಮಸೂದೆ ಶೀಘ್ರ ಜಾರಿ ಸಚಿವಾಲಯಗಳ ಎನ್‌ಒಸಿ

ಮಂಗಳೂರು: ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರಗೊಂಡು ಇದೀಗ ಕೇಂದ್ರದ ಅಂಗಳದಲ್ಲಿ ಇರುವ ಕಂಬಳ ಮಸೂದೆ ಶೀಘ್ರ ರಾಷ್ಟ್ರಪತಿ ಅಂಕಿತ ಪಡೆಯುವ ನಿಟ್ಟಿನಲ್ಲಿ ನಿಯೋಗ ಮಾ. 14ರಂದು ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿತು.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ನೇತೃತ್ವದಲ್ಲಿ ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ, ಕಾನೂನು ಹೋರಾಟಗಾರ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಕೋಶಾಧಿಕಾರಿ ಪಿ.ಆರ್‌. ಶೆಟ್ಟಿ ಅವರನ್ನು ಒಳಗೊಂಡ ನಿಯೋಗ ಕಂಬಳಕ್ಕೆ ಸಂಬಂಧಪಟ್ಟಂತೆ ಹೊಸದಿಲ್ಲಿಯಲ್ಲಿ ವಿವಿಧ ಸಚಿವರನ್ನು ಭೇಟಿ ಮಾಡಿ ವಿವರಿಸಿತು.

ಕೇಂದ್ರ ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ಅವರು ಮಸೂದೆ ಬಗ್ಗೆ ನಿರಾಕ್ಷೇಪಣ ಪತ್ರ ನೀಡಿದ ಬಳಿಕ ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್‌ ಶರ್ಮಾ ಅವರನ್ನು ಭೇಟಿ ಮಾಡಲಾಯಿತು. ಸಾಂಸ್ಕೃತಿಕ ಸಚಿವರು ಕೂಡ ನಿರಾಪೇಕ್ಷಣಾ ಪತ್ರ ನೀಡಿದ ಬಳಿಕ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಬಳಿಗೆ ಮಸೂದೆ ರವಾನೆಯಾಯಿತು. ಸಂಜೆ 4 ಗಂಟೆಗೆ ಗೃಹ ಸಚಿವರನ್ನು ಭೇಟಿ ಮಾಡಲಾಗಿದ್ದು ಅಲ್ಲಿಂದ ರಾಷ್ಟ್ರಪತಿಗಳ ಬಳಿಗೆ ರವಾನೆಯಾಗುತ್ತಿದೆ ಎಂದು ಸಂಸದ ನಳಿನ್‌ ತಿಳಿಸಿದ್ದಾರೆ.

ಕಂಬಳ ತುಳುನಾಡಿನ ಜಾನಪದ ಕ್ರೀಡೆಯಾಗಿದ್ದು ಸಾಂಸ್ಕೃತಿಕವಾಗಿಯೂ ಪ್ರಾಮುಖ್ಯ ಪಡೆದಿದೆ. ತಮಿಳುನಾಡಿನ ಜಲ್ಲಿಕಟ್ಟು ಜತೆಗೆ ಕಂಬಳವನ್ನು ಹೋಲಿಕೆ ಮಾಡುವುದು ಸರಿಯಲ್ಲ. ಕಂಬಳದಲ್ಲಿ ಪ್ರಾಣಿಹಿಂಸೆ ಇಲ್ಲ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದವರು ತಿಳಿಸಿದ್ದಾರೆ.

No Comments

Leave A Comment