Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮಾಧವ ಪೈ ಕಾಲೇಜು: ರಕ್ತದಾನ ಶಿಬಿರ

ಉಡುಪಿ: ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲದಲ್ಲಿ  ಬೃಹತ್‌ ರಕ್ತದಾನ ಶಿಬಿರ ನಡೆಯಿತು.ಬ್ಲಿಡ್‌ ಬ್ಯಾಂಕ್‌ ಕುಂದಾಪುರ, ರೆಡ್‌ಕ್ರಾಸ್‌ ಸೊಸೈಟಿ, ಲಯನ್ಸ್‌ ಉಡುಪಿ ಇಂದ್ರಾಳಿ ಮತ್ತು ಮಿಡ್‌ಟೌನ್‌, ಇನ್ನರ್‌ವಿಲ್‌, ಜೇಸಿಐ ಮಣಿಪಾಲ ವತಿಯಿಂದ ನಡೆದ ಶಿಬಿರವನ್ನುಕುಂದಾಪುರ ಬ್ಲಿಡ್‌ಬ್ಯಾಂಕ್‌ ವೈದ್ಯಾಧಿಕಾರಿ ಡಾ| ಎಚ್‌.ಎಸ್‌
ಮಲ್ಲಿ ಉದ್ಘಾಟಿಸಿದರು.

ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಪೈ ಅಧ್ಯಕ್ಷತೆ ವಹಿಸಿದ್ದರು.  ಕಾಲೇಜಿನ ಆಡಳಿತಾಧಿಕಾರಿ  ಪ್ರೊ| ಶೆಟ್ಟಿ, ಡಾ| ಸುರೇಶ್‌ ಶೆಣೈ,ರೆಡ್‌ಕ್ರಾಸ್‌ ಸೊಸೈಟಿಯ ಅಧ್ಯಕ್ಷ ಬಿ. ರಾಜೀವ ಶೆಟ್ಟಿ, ಶಿವರಾಮ ಶೆಟ್ಟಿ, ಶೋಭಾ ಮಧುಸೂದ‌ನ್‌ ಹೆಗಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ  ಪ್ರಭು ಕರ್ವಾಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್‌ ವತಿಯಿಂದ ಕಾಲೇಜಿಗೆ ಪ್ರಮಾಣ ಪತ್ರ ಹಸ್ತಾಂತರಿಸಲಾಯಿತು. ಎನ್‌ಎಸ್‌ಎಸ್‌ ಯೋಜನಾಧಿಕಾರಿ ಪ್ರಕಾಶ್‌ ಭಟ್‌ ಸ್ವಾಗತಿಸಿದರು. ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರ್ವಹಿಸಿದರು. ಯುವ ರೆಡ್‌ಕ್ರಾಸ್‌ ಸಂಯೋಜಕಿ ಜಯಲಕ್ಷ್ಮೀ ವಂದಿಸಿದರು.

No Comments

Leave A Comment