Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಂಜೇಶ್ವರದ ಲಾಲಕಿ, ಸ್ವರ್ಣ ಕಲಶಕ್ಕೆ ಸ್ವಾಗತ

ಉಡುಪಿ: ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಿಂದ ಹೊರಟ ಮಂಜೇಶ್ವರ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳುವ ನೂತನ ಬೆಳ್ಳಿ ಲಾಲಕಿ ಮತ್ತು ಸ್ವರ್ಣ ಕಲಶದ ಸಮರ್ಪಣಾ ಯಾತ್ರೆ ಶನಿವಾರ ಉಡುಪಿ ಲಕ್ಷಿ¾à ವೆಂಕಟೇಶ ದೇವಸ್ಥಾನಕ್ಕೆ ತಲುಪಿದಾಗ ದೇಗುಲದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ, ವಿಶೇಷ ಪೂಜೆ ನಡೆದ ಬಳಿಕ ಉದ್ಯಾವರ ಕಟಪಾಡಿಗೆ ಬೀಳ್ಕೊಡಲಾಯಿತು.

ದೇಗುಲದ ಆಡಳಿತ ಮಂಡಳಿ ಮೊಕ್ತೇಸರ ಪಿ.ವಿ. ಶೆಣೈ, ಮಂಡಳಿ ಸದಸ್ಯರಾದ ಮಟ್ಟಾರು ವಸಂತ ಕಿಣಿ, ಪುಂಡಲೀಕ ಕಾಮತ್‌, ಗಣೇಶ ಕಿಣಿ, ಅರ್ಚಕ ವಿನಾಯಕ ಭಟ್‌, ನಗರಸಭಾ ಸದಸ್ಯ ಶ್ಯಾಮ್‌ ಪ್ರಸಾದ್‌ ಕುಡ್ವ ಮೊದಲಾದವರು ಉಪಸ್ಥಿತರಿದ್ದರು.

3 ಕೆ.ಜಿ. ಬಂಗಾರದ ಕಲಶವಾಗಿದ್ದು, ಮಂಜೇಶ್ವರ ನಾಗದೇವರ ಚಿತ್ರಣ ಹೊಂದಿದೆ. ಲಾಲಕಿ 80 ಕೆ.ಜಿ. ಬೆಳ್ಳಿಯಿಂದ ತಯಾರಿಸಲಾಗಿದ್ದು, ವಿಶೇಷ ಕಲಾಕೃತಿ ಹೊಂದಿದೆ.

ಮಂಜೇಶ್ವರ ದೇವಸ್ಥಾನ 18 ಪೇಟೆಯ ದೇವಸ್ಥಾನವಾದ ಕಾರಣ ವಿವಿಧೆಡೆ ಸಂಚರಿಸಿ ಮಂಜೇಶ್ವರಕ್ಕೆ ಮಾ. 12ರಂದು ತಲುಪಿದೆ.

No Comments

Leave A Comment