Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಜೈಲಿನಿಂದ ಎಸ್ಕೇಪ್‌ ಆಗಿದ್ದ ರೇಪ್‌ ಆರೋಪಿ ಪೊಲೀಸ್‌ ಬಲೆಗೆ

ಮಂಗಳೂರು: ಜಿಲ್ಲಾ ಕಾರಾಗೃಹದಿಂದ ಮಾ. 10ರ ಬೆಳಗ್ಗೆ ಪರಾರಿಯಾದ ವಿಚಾರಣಾಧೀನ ಕೈದಿ ಜಿನ್ನಪ್ಪ ಪರವ ನನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವೀಯಾಗಿದ್ದಾರೆ.

ಸುಳ್ಯದ ದೇವಚಳ್ಳ ಗ್ರಾಮದ ಕಂದ್ರಪಾಡಿಯೆ ಎಂಬಲ್ಲಿ  ಅಡಗಿದ್ದ ಜಿನ್ನಪ್ಪನನ್ನು  ಮಂಗಳವಾರ ಬೆಳಗ್ಗೆ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಬೋಳ್ಕಳ್‌ಗುಡ್ಡದ ನಿವಾಸಿ ಜಿನ್ನಪ್ಪ ಪರವ ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಶನಿವಾರ ಊರಿಗೆ ತೆರಳಿದ್ದು,  ಅತನನ್ನು ಊರಿನ ರಿಕ್ಷಾ ಚಾಲಕರು, ಮಹಿಳೆಯರು ಸೇರಿದಂತೆ ಹಲವಾರು ಜನರು  ನೋಡಿದ್ದಾರೆ ಎಂಬ ಮಾತು ಕೇಳಿ ಬಂದಿದ್ದವು. ಗರ್ಡಾಡಿ ತೀರಾ ಗ್ರಾಮಾಂತರ ಪ್ರದೇಶವಾಗಿದ್ದು, ಈತ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಂಡಿರಬೇಕು ಎಂದು ಭಾವಿಸಿ ಜನರು ಸುಮ್ಮನಾಗಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಬರುತ್ತಾರೆ ಎಂಬ ಸುದ್ದಿ ತಿಳಿದು ಜಿನ್ನಪ್ಪ ಪರವ ಅಲ್ಲಿಂದ ಪರಾರಿಯಾಗಿದ್ದ.

ವಿಷಯ ತಿಳಿಯುತ್ತಿದ್ದಂತೆ ಮಂಗಳೂರು ಕಮಿಷನರೆಟ್‌ ಮತ್ತು ಜಿಲ್ಲಾ ಪೊಲೀಸರು ಚುರುಕಾಗಿ, ಬರ್ಕೆ ಇನ್‌ಸ್ಪೆಕ್ಟರ್‌ ರಾಜೇಶ್‌ ನೇತೃತ್ವದಲ್ಲಿ ಶೋಧ ಕಾರ್ಯ ತೀವ್ರಗೊಳಿಸಿದ್ದರು.

ಕೌಟುಂಬಿಕ ಜಾಗದ ಕಲಹ: ಜಿನ್ನಪ್ಪ ಪರವನ ಕುಟುಂಬದಲ್ಲಿ ಈತ
ಸೇರಿದಂತೆ ಒಟ್ಟು 7 ಮಂದಿ ಅಣ್ಣ-ತಮ್ಮಂದಿರು. ಇವರ ಮಧ್ಯೆ ಜಾಗದ ವಿವಾದಕ್ಕೆ ಸಂಬಂಧಿಸಿ ಅನೇಕ ವರ್ಷಗಳಿಂದ ವಿವಾದವಿದೆ. ಈ ವಿಷಯದಲ್ಲಿ ಅಣ್ಣ ನೋಣಯ್ಯ ಮತ್ತು ಜಿನ್ನಪ್ಪನ ಮಧ್ಯೆ ಅನೇಕ ಬಾರಿ ಗಲಾಟೆ ನಡೆದು ಹಲ್ಲೆ, ಕೊಲೆ ಬೆದರಿಕೆ ಪ್ರಕರಣವೂ ದಾಖಲಾಗಿದ್ದವು. ಒಂದು ಬಾರಿ ನೋಣಯ್ಯ ಕೂಡಾ ಜೈಲು ಪಾಲಾಗಿದ್ದ.

ಇದೀಗ ಇದೇ ಜಾಗದ ವಿಷಯಕ್ಕೆ ಸಂಬಂಧಿಸಿ ಮತ್ತೆ ವಿವಾದ ಭುಗಿಲೆದ್ದ ಕಾರಣ ಸೋದರನ ಮೇಲಿನ ಕೋಪದಿಂದ ಜಿನ್ನಪ್ಪ ಜೈಲಿನಿಂದ ತಪ್ಪಿಸಿ ಊರಿಗೆ ಬಂದಿದ್ದ ಎಂಬ ಮಾಹಿತಿ ಹರಿದಾಡುತ್ತಿದೆ.

No Comments

Leave A Comment