Log In
BREAKING NEWS >
ಕರಾವಳಿಯಲ್ಲಿ ಭಾರೀ ಮಳೆ-ಹಲವೆಡೆಯಲ್ಲಿ ನೆರೆ...ಜೂನ್ 22ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಅನುಗ್ರಹ ಲಕ್ಷ್ಮೀವೃತ ಕಾರ್ಯಕ್ರಮವು ಜರಗಲಿದೆ....

ಉಡುಪಿ ಜಿಲ್ಲಾ ಮಟ್ಟದ ಎಸ್.ಡಿ.ಎಂ.ಸಿ.ಸಮಾವೇಶ – 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ,ಉಡುಪಿ ಜಿಲ್ಲೆ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ(ರಿ) ಉಡುಪಿ,ಜಿಲ್ಲಾ ಪಂಚಾಯತ್ ಉಡುಪಿ,ಸಾರ್ವಜನಿಕ ಶಿಕ್ಷಣ ಇಲಾಖೆ,ಕ.ರಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ – ಉಡುಪಿ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾ ಮಟ್ಟದ ಎಸ್.ಡಿ.ಎಂ.ಸಿ.ಸಮಾವೇಶ – 2017 ವನ್ನು ಪರ್ಯಾಯ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು,ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಸಮಾವೇಶದಲ್ಲಿ ಶಿಕ್ಷಣ ತಜ್ಞರಾದ ಡಾ.ನಿರಂಜನಾರಾಧ್ಯ ವಿ.ಪಿ.ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ.ರಾಜ್ಯ ಕಾರ್ಯದರ್ಶಿ ಶೋಭಾ ಭಾಸ್ಕರ,ಬಿ.ಜಯಕರ ಶೆಟ್ಟಿ,ಇಂದ್ರಾಳಿ,ಪಿ.ಕೆ.ಪುರುಷೋತ್ತಮ್,ರೆನ್ನಿ ಡಿಸೋಜ,ಜನಾರ್ದನ ಭಂಡಾರ್ಕರ್ ,ಎಸ್.ಡಿ.ಎಂ.ಸಿ.ಸಿ.ಎಫ್.ನ ಮಾಜಿ ರಾಜ್ಯ ಸಂಚಾಲಕರಾದ ಗೋವಿಂದರಾಜು ಉಪಸ್ಥಿತರಿದ್ದರು.

No Comments

Leave A Comment