Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಪರ್ರೀಕರ್‌ ಪ್ರಮಾಣಕ್ಕೆ ಸುಪ್ರೀಂ ತಡೆ ಇಲ್ಲ; ಮಾರ್ಚ್‌ 16 ಸದನ ಬಲಾಬಲ

ಹೊಸದಿಲ್ಲಿ : ಗೋವೆಯ ರಾಜ್ಯಪಾಲರಾಗಿರುವ ಮೃದುಲಾ ಸಿನ್ಹಾ ಅವರು ಬಿಜೆಪಿ ನಾಯಕ ಮನೋಹರ್‌ ಪರ್ರೀಕರ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿರುವ ಅರ್ಜಿಯನ್ನು ಇಂದು ಮಂಗಳವಾರ ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್‌, ಮಾರ್ಚ್‌ 16ರಂದು ಸದನ ಬಲಾಬಲ ಪರೀಕ್ಷೆಗೆ ಆದೇಶ ನೀಡಿದೆ. ಆದರೆ ಮನೋಹರ್‌ ಪರ್ರೀಕರ್‌ ಅವರ ಇಂದಿನ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಿಲ್ಲ.40 ಸದಸ್ಯ ಬಲದ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 17 ಸ್ಥಾನ ಗೆದ್ದಿರುವ ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ. ಬಿಜೆಪಿಗೆ 13 ಸ್ಥಾನಗಳು ಸಿಕ್ಕಿದ್ದು ಸರಕಾರ ರಚನೆಗೆ ಅದಕ್ಕೆ ಎಂಜಿಪಿ ಮತ್ತು ಗೋವಾ ಫಾರ್ವರ್ಡ್‌ ಪಕ್ಷ ಬೆಂಬಲ ನೀಡಿದೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ತಮಗೆ ಸರಕಾರ ರಚಿಸಲು ಬಹುಮತ ಇದೆ ಎಂದು ಹೇಳಿಕೊಂಡಿವೆ. ಅಂತಿರುವಾಗ ಸದನ ಬಲಾಬಲ ಪರೀಕ್ಷೆಯಿಂದ ಯಾವ ಪಕ್ಷಕ್ಕೆ ಖಚಿತ ಬಹುಮತ ಇದೆ ಎಂಬುದು ಸಾಬೀತಾಗಲಿದೆ ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ. ಅದಕ್ಕಾಗಿ ಅದು ಅತ್ಯಂತ ಹಿರಿಯ ಶಾಸಕರೊಬ್ಬರನ್ನು ಪ್ರೋಟೆಮ್‌ (ತಾತ್ಕಾಲಿಕ) ಸ್ಪೀಕರ್‌ ಆಗಿ ನೇಮಿಸಲಿದೆ.

ಕಾಂಗ್ರೆಸ್‌ನ ಗೋವಾ ಶಾಸಂಕಾಂಗ ಪಕ್ಷದ ನಾಯಕ ಚಂದ್ರಕಾಂತ ಕಾವಳೇಕರ್‌ ಅವರು “ಮುಖ್ಯಮಂತ್ರಿಯಾಗಿ ಮನೋಹರ್‌ ಪರ್ರೀಕರ್‌ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಬೇಕು’ ಎಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿಸದ್ದರು. ಮಾತ್ರವಲ್ಲದೆ ರಾಜ್ಯಪಾಲರು ಪರ್ರೀಕರ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿ ಪ್ರಕಟಿಸಿರುವ ನಿರ್ಧಾರವನ್ನು ಕೂಡ ಅನೂರ್ಜಿತಗೊಳಿಸುವಂತೆ ಕೋರಿದ್ದರು.

ವಿಚಾರಣೆ ವೇಳೆ ಕಾಂಗ್ರೆಸ್‌ ಪ್ರತಿನಿಧಿಸಿದ ಅಭಿಷೇಕ್‌ ಸಿಂಘವಿ ಅವರು “ಬಿಜೆಪಿಯು ಕುದುರೆ ವ್ಯಾಪಾರದಲ್ಲಿ ತೊಡಗಿದೆ ಮತ್ತು ಸಾಂವಿಧಾನಿಕ ಕ್ರಮಗಳ ಉಲ್ಲಂಘನೆ ಮಾಡುತ್ತಿದೆ’ ಎಂದು ಆರೋಪಿಸಿದರು.

No Comments

Leave A Comment