Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ವಿದ್ಯಾವಾರಿಧಿ ಶಾಲೆ ದುರಂತ:ಮೃತ ಮಕ್ಕಳು ಸೇವಿಸಿದ್ದ ಸಾರಿನಲ್ಲಿ ಕೀಟನಾಶಕ ಮಿಶ್ರಣ?

ತುಮಕೂರು: ವಿದ್ಯಾವಾರಿಧಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ಸಾವಿಗೀಡಾದ ಪ್ರಕರಣ ಸಂಬಂಧ ಸಾಂಬಾರಿನಲ್ಲಿ ಕೀಟನಾಶಕ ಬಳಸಿರುವ ಶಂಕೆ ವ್ಯಕ್ತವಾಗಿದೆ.

ಮೃತ ವಿದ್ಯಾರ್ಥಿಗಲ ಮರಣೋತ್ತರ ಪರೀಕ್ಷೆ ವರದಿ  ಆಧಾರದ ಮೇಲೆ ನಡೆದ ಪ್ರಾಥಮಿಕ ತನಿಖೆಯಿಂದ ಸಾರಿನಲ್ಲಿ ಅಲ್ಯೂಮಿನಿಯಂ ಪ್ರಾಸ್ಪೇಟ್ ಎಂಬ ಕೀಟನಾಶಕ ಬೆರೆಸಲಾಗಿತ್ತು ಎಂದು ತಿಳಿದು ಬಂದಿದೆ.ರಸಾಯನಿಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಇದನ್ನು ಸುಲಭವಾಗಿ ಖರೀದಿಸಬಹುದಾಗಿದೆ.

ವೈದ್ಯರ ತಂಡ ಈ ರೀತಿಯ ರಾಸಾಯನಿಕ ವಸ್ತುವನ್ನು ಹುಳಿಯಾರುವಿನ ಅಂಗಡಿಗಳಿಂದ ಸಂಗ್ರಹಿಸಿದೆ.ರೈತರು ಈ ಕೀಟನಾಶಕವನ್ನು ಧಾನ್ಯಗಳ ಚೀಲದಲ್ಲಿ ಹಾಕಿಡುತ್ತಾರೆ ಎಂದು ಡಾಯ ರಂಗಸ್ವಾಮಿ ಹೇಳಿದ್ದಾರೆ.ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೂ ನಾವು ಯಾವುದೇ ನಿರ್ಧಾರಕ್ಕೆ ಬರಲಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಹುಳಿಯಾರಿನ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ಶಾಲೆಯ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಯಿ ತಿಮ್ಮನಹಳ್ಳಿ ಗ್ರಾಮಸ್ಥರು ಶಾಲೆಯ ಆವರಣದಲ್ಲಿ  ದಿಢೀರ್‌ ಪ್ರತಿಭಟನೆ ನಡೆಸಿದರು.

ಪ್ರಕರಣದ ಬಳಿಕ ಶಾಲೆಗೆ ರಜೆ ಘೋಷಿಸಲಾಗಿತ್ತು. ಬೆಳಿಗ್ಗೆ ಶಾಲೆ ಪುನಾರಂಭಗೊಂಡಿತ್ತು. ಪ್ರತಿಭಟನೆಯಿಂದಾಗಿ ಶಾಲೆಯ ಮುಂಭಾಗ ಉದ್ವಿಗ್ನ ವಾತಾವರಣ ಕಂಡುಬಂತು.

ಶಾಲೆಯ ಮಾಲೀಕರಾದ ಕಿರಣ್‌ಕುಮಾರ್‌, ಕವಿತಾ ಸ್ಥಳಕ್ಕೆ ಬಂದು ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ರಾತ್ರಿವರೆಗೂ ಪ್ರತಿಭಟನೆ ಮುಂದುವರೆದಿತ್ತು.

No Comments

Leave A Comment