Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬಜಪೆ: ಮಂಗಳೂರು -ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ  ಸೇತುವೆಯ ಸಮೀಪದ ಕುಕ್ಕುದಕಟ್ಟೆ ಎಂಬಲ್ಲಿ ಅಲದ ಮರಕ್ಕೆ ರವಿವಾರ ಬೆಂಕಿ ತಗಲಿದ ಕಾರಣ ರಾಷ್ಟ್ರೀಯ ಹೆದ್ದಾರಿ ಸಂಚಾರ  ಕೆಲಕಾಲ ಅಸ್ತವ್ಯಸ್ತ ಗೊಂಡಿತು.

ಆಲದ ಮರ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದು ಮಧ್ಯಾಹ್ನವೇ ಬೆಂಕಿ ತಗುಲಿತ್ತು. ಈ ಬಗ್ಗೆ ಅಗ್ನಿಶಾಮಕ ದಳದವರನ್ನು ಕರೆಸಲಾಯಿತು. ಅವರು ಬೆಂಕಿ ನಂದಿಸಲು ಬೆಂಕಿ ಹಿಡಿದಿದ್ದ ಗೆಲ್ಲುಗಳನ್ನು ಕಡಿಯಬೇಕಾಯಿತು.ಅದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಯಿತು.

ನಡುನಡುವೆ ವಾಹನಗಳಿಗೆ ಸಂಚಾರಿಸಲು ಅನುವು ಮಾಡಿ ಕೊಡಲಾಯಿತು. ರಾತ್ರಿ ಸುಮಾರು  8 ಗಂಟೆ ವೇಳೆಗೆ ಮರ ಕಡಿದು ರಸ್ತೆ ವಾಹನ ಸಂಚಾರಕ್ಕೆ ತೆರವು ಮಾಡಲಾಯಿತು.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದೊಂದಿಗೆ ಅರಣ್ಯ ಇಲಾಖೆ, ಜಿ. ಪಂ. ಸದಸ್ಯ ಯು.ಪಿ.,ಇಬ್ರಾಹಿಂ, ತಾ.  ಪಂ.  ಸದಸ್ಯ ಸಚಿನ್‌,ಗ್ರಾ, ಪಂ. ಉಪಾಧ್ಯಕ್ಷ ಉದಯ್‌ ಭಟ್‌ ಹಾಗೂ ಊರಿನವರು ಭಾಗವಹಿಸಿದ್ದರು.

No Comments

Leave A Comment