Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಪೊಲೀಸರಿಗೆ ಸಮವಸ್ತ್ರ ಕಡ್ಡಾಯ : ಡಿಜಿಪಿ ಆದೇಶ

ಬೆಂಗಳೂರು: ಶಿಸ್ತಿನ ಇಲಾಖೆಯೆಂದೇ ಪರಿಗಣಿತವಾದ ಪೊಲೀಸ್‌ ಇಲಾಖೆಯಲ್ಲಿ ಇತ್ತೀಚೆಗೆ ಕೆಲ ಅಧಿಕಾರಿಗಳು ಸಮವಸ್ತ್ರ ಧರಿಸದೇ ಕರ್ತವ್ಯಕ್ಕೆ ಹಾಜರಾಗುತ್ತಿರುವ ಹಿನ್ನೆಲೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ ದತ್ತಾ, ಕರ್ತವ್ಯದ ವೇಳೆ ಕಡ್ಡಾಯವಾಗಿ ಸಮವಸ್ತ್ರ ಧರಿಸುವಂತೆ ಆದೇಶ ಹೊರಡಿಸಿದ್ದಾರೆ. ಕೆಲ ಹಿರಿಯ ಮತ್ತು ಕಿರಿಯ
ಅಧಿಕಾರಿಗಳು ಅಪರಾಧ ನಡೆದ ಸ್ಥಳಗಳಲ್ಲಿ ಸಿವಿಲ್‌ ಡ್ರಸ್‌ನಲ್ಲಿ ಪಾಲ್ಗೊಳ್ಳುವುದು, ಠಾಣೆಗಳಿಗೆ ಸಾಮಾನ್ಯ ದಿರಿಸಿನಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿರುವುದು. ಪೊಲೀಸ್‌ ಮಹಾನಿರ್ದೇಶಕರ ಗಮನಕ್ಕೆ ಬಂದಿದ್ದು, ಕಡ್ಡಾಯವಾಗಿ ಸಮವಸ್ತ್ರಧರಿಸುವಂತೆ ತಾಕೀತು ಮಾಡಿದ್ದಾರೆ. ಅಲ್ಲದೆ, ಸಮವಸ್ತ್ರ ಧರಿಸದೇ ಇದ್ದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಆದೇಶದಲ್ಲಿ ಏನಿದೆ?: ಪೊಲೀಸ್‌ ಸಿಬ್ಬಂದಿ ಮಾತ್ರವಲ್ಲದೆ ಅಧಿಕಾರಿಗಳು ಕೂಡ ಇನ್ನು ಮುಂದೆ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಪೊಲೀಸ್‌ ಸಮವಸ್ತ್ರ ಧರಿಸಬೇಕು. ಹಿರಿಯ ಅಧಿಕಾರಿಗಳು ತಮ್ಮ ಕೈಕೆಳಗಿನ ಸಿಬ್ಬಂದಿ ಡ್ರಸ್‌ಕೋಡ್‌ ಪಾಲಿಸುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಪೊಲೀಸ್‌ ಆಯುಕ್ತರು ಮತ್ತು ಜಿಲ್ಲಾ ಎಸ್‌ಪಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ವಿಚಾರದಲ್ಲಿ ಹಿರಿಯ ಅಧಿಕಾರಿಗಳು ಇತರ ಸಿಬ್ಬಂದಿಗೆ ಮಾದರಿಯಾಗಿರಬೇಕು ಎಂದು ಡಿಜಿಪಿ ತಮ್ಮ ಆದೇಶ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

 

No Comments

Leave A Comment