Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ರಂಗು ರಂಗಿನ ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಜನ

ಬೆಂಗಳೂರು: ಬೆಳಿಗ್ಗೆಯೇ ನಗರದ ಬೀದಿಗಳಲ್ಲಿ ಹೋಳಿ ಹಬ್ಬ ಸಂಭ್ರಮ ಮನೆ ಮಾಡಿತ್ತು. ಒಬ್ಬರಿಗೊಬ್ಬರು ಬಣ್ಣಗಳನ್ನು ಹಚ್ಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಪರೀಕ್ಷೆಗಳ ಚಿಂತೆ ಮರೆತು ಮಕ್ಕಳು, ವಿದ್ಯಾರ್ಥಿಗಳು ಬಣ್ಣಗಳೊಂದಿಗೆ ನಲಿದಾಡಿದರು. ಪೋಷಕರಿಗೆ ಮಾತ್ರ ಬಣ್ಣ ಹಿಡಿದು ಓಡುವ ಮಕ್ಕಳನ್ನು ಕರೆತರುವುದೇ ಚಿಂತೆಯಾಗಿತ್ತು.

ನೀರಿನ ಸಮಸ್ಯೆಯಿಂದ ಈ ಬಾರಿ ಹೋಳಿ ಆಚರಣೆ ಸ್ವಲ್ಪ ಮಟ್ಟಿಗೆ ಕಳೆಗುಂದಿದೆ. ಅದನ್ನು ಹೊರತುಪಡಿಸಿ, ಬಿಸಿಲಿನ ಝಳವನ್ನು ಲೆಕ್ಕಿಸದೇ, ಅನೇಕ ಭಾಗಗಳಲ್ಲಿ ಬಾಟಲಿಗಳಲ್ಲಿ ರಂಗು ರಂಗಿನ ನೀರನ್ನು ತುಂಬಿಸಿ ಪರಸ್ಪರ ಎರಚಿಕೊಂಡರು.

ಅಪಾರ್ಟ್‌ಮೆಂಟ್‌ನಲ್ಲಿ ನಿರ್ಬಂಧ: ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಿರುವ ಕಾರಣ, ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಈ ಬಾರಿ ಹೋಳಿ ಆಚರಣೆಗೆ ಅವಕಾಶ ನೀಡಿರಲಿಲ್ಲ. ಆದರೆ ಈ ನಿಷೇಧವನ್ನು ಲೆಕ್ಕಿಸದೇ ಯುವಜನತೆ ತಮ್ಮ ಅಪಾರ್ಟ್‌ಮೆಂಟ್‌ಗಳಿಂದ ಹೊರಬಂದು ಹಬ್ಬ ಆಚರಿಸಿದರು.

ಮಕ್ಕಳ ಆಟಕ್ಕೆ ಎಲ್ಲೆಯುಂಟೆ…

ವಸಂತನಗರದಲ್ಲಿ ಮಕ್ಕಳು ಬಕೆಟುಗಳಲ್ಲಿ ಬಣ್ಣದ ನೀರನ್ನು ತುಂಬಿಸಿ ಓಕುಳಿಯ ಮಜ್ಜನ ಮಾಡಿದರು

ತಪ್ಪಿಸಿಕೊಂಡು ಹೋಗುವೆಯಾ…?

ವಿಜಯನಗರದಲ್ಲಿ ಬಣ್ಣ ಬೇಡ ಎಂದು ಓಡುತ್ತಿದ್ದ ಸ್ನೇಹಿತೆಯನ್ನು ಹಿಡಿದು ಮುಷ್ಟಿ ತುಂಬ ಬಣ್ಣ ಬಳಿದು ಖುಷಿಪಟ್ಟರು

‘ಸ್ವಲ್ಪ ಬಣ್ಣ ಹಚ್ಚಲೇ…’

ವಸಂತನಗರದ ಅಲಿ ಅಸ್ಗರ್ ರಸ್ತೆಯಲ್ಲಿ ಮಹಿಳೆಯೊಬ್ಬರು ಯುವತಿಯ ಕೆನ್ನೆಗಳಿಗೆ ಬಣ್ಣ ಸವರಿ ರಂಗಿನ ಹಬ್ಬದ ಸಂಭ್ರಮ ಹಂಚಿಕೊಂಡರು

ಅಯ್ಯೋ ಕಣ್ಣಿಗೆ ಬಣ್ಣ ಬಿತ್ತೇ…

ಹೋಳಿ ಸಂಭ್ರಮದಲ್ಲಿ ಕಣ್ಣಿಗೆ ಬಣ್ಣ ಬಿದ್ದು ಅಳುತ್ತಿದ್ದ ಮಗುವಿನ ಬಣ್ಣ ಒರೆಸಿದ ತಾಯಿ. ಇದು ಕಂಡುಬಂದದ್ದು ದಾಸರಹಳ್ಳಿಯ ಕೆಂಪೇಗೌಡ ನಗರದಲ್ಲಿನ ಹೋಳಿ ಸಂಭ್ರಮದಲ್ಲಿ..

No Comments

Leave A Comment