Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಕಾರಿಗೆ ಬಸ್ ಡಿಕ್ಕಿ: ನಗರದ ಇಬ್ಬರು ಸಾವು

ಶ್ರೀರಂಗಪಟ್ಟಣ: ಕಾರಿಗೆ ಬಸ್ ಡಿಕ್ಕಿ ಹೊಡೆ ಪರಿಣಾಮ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಚೆಕ್ ಪೋಸ್ಟ್ ಬಳಿ ನಡೆದಿದೆ.

ಬೆಂಗಳೂರು ಆರ್.ಟಿ. ನಗರದ ನಿವಾಸಿ ಲಿಂಗೇಶ್ (37) ಸ್ಥಳದಲ್ಲೇ ಮೃತಪಟ್ಟರೆ, ಈತನ ದೊಡ್ಡಮ್ಮನ ಮಗ ಕಿರಣ್ (11) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾನೆ.

ಕಾರಿನಲ್ಲಿದ್ದ ಅರುಣ್ (23), ರಾಹುಲ್ (34) ಹಾಗೂ ಕಾರ್ತಿಕೇಯನ್ (36) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಗಾಯಾಳುಗಳು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ತಮ್ಮ ತಾಯಿ ಕಮಲಮ್ಮರ 11ನೇ ದಿನದ  ಶ್ರದ್ಧಾಕಾರ್ಯ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಬಿಇಎಂಎಲ್ ನೌಕರರನ್ನು ಕೊಂಡೊಯ್ಯುತ್ತಿದ್ದ ಸಾರಿಗೆ ವಾಹನದ ಕಾರಿನ ಮುಂಭಾಗಕ್ಕೆ ಏಕಾಏಕಿ ಡಿಕ್ಕಿ ಹೊಡೆದಿದೆ. ಶ್ರೀರಂಗಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

No Comments

Leave A Comment