Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ವಿದ್ಯಾವಾರಿಧಿ ವಸತಿ ಶಾಲೆ ವಿಷಾಹಾರದ ಸೇವನೆ ಪ್ರಕರಣ: 4ಕ್ಕೆ ಏರಿದ ಮೃತರ ಸಂಖ್ಯೆ

ತುಮಕೂರು: ಹುಳಿಯಾರಿನ ವಿದ್ಯಾವಾರಧಿ ಶಾಲೆಯಲ್ಲಿ ವಿಷಯುಕ್ತ ಆಹಾರ ಸೇವನೆಯಿಂದ ಅಸ್ವಸ್ಥರಾಗಿ ಜಿಲ್ಲಾಸ್ಪಾತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶಾಲೆಯ ಸೆಕ್ಯೂರಿಟಿ ಗಾರ್ಡ್‌ ರಮೇಶ್ (45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಕಳೆದ ಬುಧವಾರ ರಾತ್ರಿ ವಿಷಾಹಾರ ಸೇವನೆಯಿಂದ ಶಾಲೆಯ ಮೂರು ಮಂದಿ ವಿದ್ಯಾರ್ಥಿಗಳು ಮೃತಪಟ್ಟದ್ದರು. ರಮೇಶ್‌ ಹಾಗೂ ಮತ್ತೊಬ್ಬ ವಿದ್ಯಾರ್ಥಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಮುಖ ಆರೋಪಿಗಳಿಗೆ ಜಾಮೀನು
ಶನಿವಾರ ರಾತ್ರಿ ಹುಳಿಯಾರಿನ ಪೊಲೀಸ್ ಠಾಣೆಗೆ ಹಾಜರಾಗಿದ್ದ ವಿದ್ಯಾವಾರಿಧಿ ಶಾಲೆಯ ಅಧ್ಯಕ್ಷ ಕಿರಣಕುಮಾರ್ ಮತ್ತು ಕಾರ್ಯದರ್ಶಿ ಕವಿತಾ ಅವರಿಗೆ ತಿಪಟೂರಿನ 1ನೇ ಜೆಎಂಎಫ್‌ಎಸಿ ನ್ಯಾಯಾಲಯ ಜಾಮೀನು ನೀಡಿದೆ.

ಬುಧವಾರ ರಾತ್ರಿ ವಿಷಾಹಾರ ಸೇವಿಸಿ ಮೂವರು ಮಕ್ಕಳು ಮೃತಪಟ್ಟ ಪ್ರಕರಣದಲ್ಲಿ ಕಿರಣಕುಮಾರ್ 1 ನೇ ಮತ್ತು ಕವಿತಾ 2ನೇ ಆರೋಪಿಯಾಗಿದ್ದಾರೆ. ಇಬ್ಬರನ್ನೂ ಪೊಲೀಸರು ತಡ ರಾತ್ರಿ 1 ಗಂಟೆಗೆ ತಿಪಟೂರಿನ 1ನೇ ಜೆಎಂಎಫ್‌ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಆರೋಪಿಗಳ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿದ್ದಾರೆ.

ಬೇಕರಿ ತಿನಿಸು ತಿಂದು ನಾಲ್ವರು ಅಸ್ವಸ್ಥ
ತುಮಕೂರು ಸಮೀಪದ ತೋವಿನಕೆರೆ ಗ್ರಾಮದ ಭೈರವೇಶ್ವರ ಬೇಕರಿಯಲ್ಲಿ ಖರೀದಿಸಿದ ತಿನಿಸು ತಿಂದು ನಾಲ್ವರು ಅಸ್ವಸ್ಥರಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಈರಮ್ಮ, ಲಕ್ಷ್ಮಿ, ಗಂಗಮ್ಮ, ಪ್ರೇಮಾ ಮತ್ತು ಆಶಾ ಅಸ್ವಸ್ಥಗೊಂಡವರು. ಈ ಪೈಕಿ ಗಂಗಮ್ಮ ಮತ್ತು ಪ್ರೇಮಾ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶಾ ಎಂಬುವರು ತೋವಿನಕೆರೆ ಗ್ರಾಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರೆಲ್ಲರೂ ತೋವಿನಕೆರೆ ಬಳಿಯ ದಾಸರಹಳ್ಳಿಯ ನಿವಾಸಿಗಳು. ಇವರು ಅಸ್ವಸ್ಥಗೊಂಡ ವಿಷಯ ತಿಳಿಯುತ್ತಿದ್ದಂತೆಯೆ ಭೈರವೇಶ್ವರ ಬೇಕರಿ ಮಾಲೀಕ ಅಂಗಡಿಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ.

No Comments

Leave A Comment