Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

16 ವರ್ಷಗಳ ಹೋರಾಟದ ಬಳಿಕವೂ ಇರೋಮ್ ಶರ್ಮಿಳಾಗೆ ಬಿದ್ದಿದ್ದು ಕೇವಲ 90 ಮತ!

ಇಂಫಾಲ: ಮಣಿಪುರದ ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಭಾರಿ ಅಂತರದಿಂದ ಪರಾಭವಗೊಂಡಿದ್ದ ಪಿಆರ್‌ಜೆಎ ಪಕ್ಷದ ಸಂಸ್ಥಾಪಕಿ ಇರೋಮ್ ಶರ್ಮಿಳಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಮಣಿಪುರದಲ್ಲಿನ ಸೇನಾ ದೌರ್ಜನ್ಯದ ವಿರುದ್ಧ ಸತತ 16 ವರ್ಷಗಳಿಂದ ಹೋರಾಡಿ, ತಮ್ಮ ಸತ್ಯಾಗ್ರಹದಿಂದಲೇ ಖ್ಯಾತಿ ಪಡೆದಿದ್ದ ಇರೋಮ್ ಶರ್ಮಿಳಾ ಚುನಾವಣೆಯಲ್ಲಿ ಗಳಿಸಿದ್ದ ಕೇವಲ 90 ಮತಗಳು ಮಾತ್ರ. ತೌಬಾಲ್  ಕ್ಷೇತ್ರದಿಂದ ಸ್ಪರ್ಧಿಸಿದ್ದ ಇರೋಮ್ ವಿರುದ್ಧ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ಭಾರಿ ಪ್ರಮಾಣದ ಮತಗಳ ಅಂತರದಿಂದ ಗೆದ್ದಿದ್ದು, ಇದರಿಂದ ಮನನೊಂದಿರುವ ಇರೋಮ್ ಶರ್ಮಿಳಾ ರಾಜಕೀಯದಿಂದಲೇ ದೂರ  ಸರಿಯುವ ನಿರ್ಧಾರ ಮಾಡಿದ್ದಾರೆ.

“ಚುನಾವಣೆ ಸೋಲಿನಿಂದ ನನಗೆ ಮುಜುಗರವಾಗಿಲ್ಲ. ಆದರೆ, ಚುನಾವಣೆಗಳಿಂದ ನಾನು ಬೇಸತ್ತಿದ್ದೇನೆ. ಭವಿಷ್ಯದಲ್ಲಿ ನಾನು ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆದರೆ, ನಾನು ಸ್ಥಾಪನೆ ಮಾಡಿದ್ದ ಪಿಆರ್‌ಜೆಎ ಪಕ್ಷ  ಬದುಕುಳಿಯಬೇಕು. ನಾನು ಪ್ರಚಾರಕ್ಕೆ ತೆರಳಿದ್ದ ವೇಳೆ ಪ್ರತಿಯೊಬ್ಬರೂ ನನ್ನ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗೆಲ್ಲಿಸುವುದಾಗಿ ಹೇಳಿದ್ದರು. ಆದರೆ, ಮತದಾನದ ದಿನ ತಮ್ಮ ಸ್ವಾರ್ಥಕ್ಕಾಗಿ ಇತರ ಅಭ್ಯರ್ಥಿಗೆ ಮತ  ಚಲಾಯಿಸಿದ್ದಾರೆ ಎಂದು ಇರೋಮ್ ಶರ್ಮಿಳಾ ಅವರು ಮತದಾರರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ

No Comments

Leave A Comment