Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಚತ್ತೀಸ್ ಗಢ; ನಕ್ಸಲ್ ದಾಳಿಗೆ 12 ಮಂದಿ ಸಿಆರ್ ಪಿಎಫ್ ಯೋಧರು ಬಲಿ

ರಾಯ್ ಪುರ್(ಚತ್ತೀಸ್ ಗಢ): ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರು ಮತ್ತೆ ಅಟ್ಟಹಾಸ ಗೈದಿದ್ದು, ನಕ್ಸಲ್ ದಾಳಿಗೆ ಸುಮಾರು 12 ಮಂದಿ ಸಿಆರ್ ಪಿಎಫ್ ಬಲಿಯಾಗಿರುವ ಘಟನೆ ಶನಿವಾರ ನಡೆದಿದೆ.

ಸುಕ್ಮಾ ಜಿಲ್ಲೆಯ ಭೆಜ್ಜಿ ಮತ್ತು ಕುಟ್ಟಾಚೇರು ನಡುವೆ ಮಾವೋವಾದಿಗಳು ಯದ್ವಾತದ್ವಾ ಗುಂಡಿನ ಸುರಿಮಳೆಗೈಯುವ ಮೂಲಕ 12 ಮಂದಿ ಸಿಆರ್ ಪಿಎಫ್ ಯೋಧರನ್ನು ಹತ್ಯೆಗೈದಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆಯ ಬಳಿಕ ನಕ್ಸಲೀಯರು ಸಿಆರ್ ಪಿಎಫ್ ಭದ್ರತಾ ಯೋಧರ ಬಳಿ ಇದ್ದ ಶಸ್ತ್ರಾಸ್ತ್ರವನ್ನು ಲೂಟಿಗೈದಿರುವುದಾಗಿ ವರದಿ ವಿವರಿಸಿದೆ. ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ.

ಪ್ರಮುಖ ದಾಳಿ ಕುರಿತಂತೆ ಪ್ರಧಾನಿ ಮೋದಿ ಅವರು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಜೊತೆ ಮಾತುಕತೆ ನಡೆಸಿದ್ದು, ಸಂಜೆ ರಾಜನಾಥ ಸಿಂಗ್ ಸುಕ್ಮಾಗೆ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment