Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮುರಿದು ಬಿತ್ತು ಪಾಕ್ ನಟಿ ವೀಣಾ ಮಲಿಕ್ ದಾಂಪತ್ಯ: ಪತಿ ಅಸಾದ್ ಖಟ್ಟಾಕ್ ಗೆ ವಿಚ್ಛೇದನ

ನವದೆಹಲಿ: ಸದಾ ಒಂದಿಲ್ಲೊಂದು ವಿಷಯದಿಂದ ಸುದ್ದಿಯಾಗುತ್ತಿದ್ದ ಪಾಕಿಸ್ತಾನಿ ನಟಿ ವೀಣಾ ಮಲಿಕ್ ಮೂರು ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ. ಪತಿ ಅಸಾದ್ ಖಟ್ಟಾಕ್ ಗೆ ವೀಣಾ ವಿಚ್ಛೇದನ ನೀಡಿದ್ದಾರೆ.

ಲಾಹೋರ್ ಕೌಟುಂಬಿಕ ನ್ಯಾಯಾಲಯಲ್ಲಿ ವೀಣಾ ಮಲಿಕ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವೀಣಾ ಪತಿಗೆ ವರದಕ್ಷಿಣೆಯ ಶೇ. 25 ರಷ್ಟು  ಹಣವನ್ನು ಖಟ್ಟಾಕ್ ಗೆ ನೀಡಬೇಕಾಗುತ್ತದೆ.ಜನವರಿ ಮೊದಲ ವಾರದಲ್ಲಿ 33 ವರ್ಷದ ವೀಣಾ ಮಲಿಕ್, ತನ್ನ ಮತ್ತು ಪತಿ ನಡುವೆ ಭಿನ್ನಾಭಿಪ್ರಾಯಗಳಿವೆ, ಹಾಗಾಗಿ ಇಬ್ಬರು ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂದು ಹೇಳಿ ಲಾಹೋರ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ನ್ಯಾಯಾಲಯ ಖಟ್ಟಾಕ್ ಗೆ ಸಮನ್ಸ್ ನೀಡಿತ್ತು. ಆದರೆ ಕೋರ್ಟ್ ನ ಈ ಸಮನ್ಸ್ ಗೆ ಖಟ್ಟಾಕ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದಾಗಿ ಕೋರ್ಟ್ ಅಸಾದ್ ಖಟ್ಟಾಕ್ ರಿಂದ ವೀಣಾಗೆ ವಿಚ್ಛೇದನ ನೀಡಿದೆ.

ಡಿಸೆಂಬರ್ 25 ರಂದು ಅಸಾದ್ ಖಟ್ಟಾಕ್ ಜೊತೆ ವಿವಾಹವಾಗಿತ್ತು.ಈ ದಂಪತಿಗೆ ಅಬ್ರಾಮ್ ಮತ್ತು ಅಮಲ್ ಎಂಬ ಇಬ್ಬರು ಮಕ್ಕಳಿದ್ದಾರೆ. ವೀಣಾ ಮಲ್ಲಿಕ್ ಶೋ ಬಿಜ್ ನಲ್ಲಿ ಭಾಗವಹಿಸಲು ಅಸಾದ್ ನಿರಾಕರಿಸಿದ ಕಾರಣ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿತ್ತು, ಕಳೆದ ಮೂರು ತಿಂಗಳಿಂದಲು ಇಬ್ಬರು ಪ್ರತ್ಯೇವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಭಾರತದಲ್ಲಿ ನಡೆದ  ಹಿಂದಿ ಬಿಗ್ ಬಾಸ್ ಸೀಸನ್-4 ನಲ್ಲಿ ವೀಣಾ ಭಾಗವಹಿಸಿದ್ದರು.

No Comments

Leave A Comment