Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

“ಬೃಹಜ್ಜಾತಕ ಮೂಲ ಶ್ಲೋಕಗಳ ಪುಸ್ತಕ ಲೋಕಾರ್ಪಣೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀಮಾನ್ ಮಧ್ವ ಸಿದ್ಧಾಂತ ಪ್ರಭೋದಕ ಸಂಸ್ಕೃತ ಸಂಶೋಧನಾ ಕೇಂದ್ರ ಉಡುಪಿ ಇದರ ಸಹಭಾಗಿತ್ವದಲ್ಲಿ ಡಾ.ಸಗ್ರಿ ಆನಂದತೀರ್ಥ ಉಪಾಧ್ಯಾಯರಿಂದ ಸಂಪಾದಿತವಾದ “ಸಾಂಖ್ಯ ಸಮೀಕ್ಷಾ” , ವಿವಿಧ ವಿದ್ವಾಂಸರಿಂದ ಸಂಪಾದಿಸಲ್ಪಟ್ಟ “ಬೃಹಜ್ಜಾತಕ ಮೂಲ ಶ್ಲೋಕಗಳು)” ಮತ್ತು ಡಾ. ಶಿವಪ್ರಸಾದ್ ತಂತ್ರಿಯವರಿಂದ ಸಂಪಾದಿತವಾದ “ಜ್ಯೌತಿಷ ಸೋಪಾನ”ದ ದ್ವಿತೀಯ ಮುದ್ರಣದ ಪುಸ್ತಕಗಳನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು, ಪೇಜಾವರ ಕಿರಿಯ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವಿದ್ವಾಂಸರುಗಳಾದ ಡಾ.ವ್ಯಸನಕೆರೆ ಪ್ರಭಂಜನಾಚಾರ್ಯ ಬೆಂಗಳೂರು, ಕಟೀಲು ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣರು,ಡಾ. ಕಡಂದಲೆ ಗಣಪತಿ ಭಟ್, ಡಾ.ಸಗ್ರಿ ಆನಂದತೀರ್ಥ ಉಪಾಧ್ಯಾಯ, ಡಾ.ಶಿವಪ್ರಸಾದ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment