Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಏಶಿಯನ್ ಗೇಮ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2017 ಆಯ್ಕೆ

ಉಡುಪಿ: ತೆಲಾಂಗಣ ರಾಜ್ಯ, ಹೈದರಾಬಾದ್, ಗಜ್ಜಿಬೋಲಿ, ಜಿ.ಎಂ.ಸಿ ಬಾಲಯೋಗಿ ಕ್ರೀಡಾಂಗಣದಲ್ಲಿ 38ನೇ ಮಾಸ್ಟರ್ಸ್ ರಾಷ್ಟ್ರೀಯ ಅತ್ಲೆಟಿಕ್ಸ್ ಚಾಂಪಿಯನ್‍ಶಿಪ್ 2017 ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್ ಕಚೇರಿ, ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ಸಿಬ್ಬಂದಿ ವಿಶ್ವನಾಥ್ ನಾಯಕ್ ಮೂಡುತೋನ್ಸೆ ಇವರು 4*100 ರಲ್ಲಿ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ 100ಮೀಟರ್ ಓಟದಲ್ಲಿ, 200 ಮೀಟರ್ ಓಟದಲ್ಲಿ 4ನೇ ಸ್ಥಾನವನ್ನು ಹಾಗೂ ಲಾಂಗ್ ಜಂಪ್‍ನಲ್ಲಿ 5ನೇ ಸ್ಥಾನವನ್ನು ಪಡೆದಿರುತ್ತಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಉಡುಪಿ ಪೊಲೀಸ್ ಸಿಬ್ಬಂದಿ ಶಂಕರ್ ಅವರು 4*400 ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ, 100 ಮೀಟರ್ ಓಟದಲ್ಲಿ 4ನೇ ಸ್ಥಾನ, 200 ಮೀಟರ್ ಓಟದಲ್ಲಿ 4ನೇ ಸ್ಥಾನವನ್ನು 4*100 ರಿಲೇ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿರುತ್ತಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಉಡುಪಿ ಪೊಲೀಸ್ ಸಿಬ್ಬಂದಿ ಶಂಕರ್ ಪೂಜಾರಿ ಬೈಂದೂರು ಅವರು 4*400 ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ, 100ಮೀ, 200 ಮೀಟರ್ ಓಟದಲ್ಲಿ 4ನೇ ಸ್ಥಾನ, 4*100 ರಿಲೇ 4ನೇ ಸ್ಥಾನ ಪಡೆದಿರುತ್ತಾರೆ

ವಿಶ್ವನಾಥ್ ನಾಯಕ್ ಮತ್ತು ಶಂಕರ್ ಪೂಜಾರಿ ಇವರಿಬ್ಬರೂ ಸೆಪ್ಟೆಂಬರ್ ತಿಂಗಳಲ್ಲಿ ಚೈನಾ ದೇಶದಲ್ಲಿ ನಡೆಯಲಿರುವ ಏಶಿಯನ್ ಗೇಮ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2017 ರ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಅಲ್ಲದೆ ದಿನಾಂಕ: 05/03/2017ರ ಮುಂಜಾನೆ ಮಣಿಪಾಲ ಮೆರಥಾನ್ – 2017 ರಂದು ಮಣಿಪಾಲದಲ್ಲಿ ನಡೆದ 21 ಕಿ.ಮಿ ಮುಕ್ತ ಹಾಫ್ ಮೆರಥಾನ್ ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ವಿಶ್ವನಾಥ ನಾಯಕ್ ಮೂಡುತೋನ್ಸೆ ರವರು 7ನೇ ಸ್ಥಾನವನ್ನು ಹಾಗೂ 10 ಕಿ.ಮಿ ಓಟದಲ್ಲಿ (ಹಿರಿಯರ ವಿಭಾಗ) ಡಿಎಆರ್ ಉಡುಪಿ ಶಂಕರ್ ಪೂಜಾರಿ ಬೈಂದೂರು ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ

No Comments

Leave A Comment