Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬಾಲಕಿಯ ಅಪಹರಣ: ಹೆಡ್‌ ಕಾನ್‌ಸ್ಟೆಬಲ್‌ ಕಸ್ಟಡಿಗೆ, ರೇಪ್‌ ಕೃತ್ಯ ?

ಹೈದರಾಬಾದ್‌ : 15 ವರ್ಷ ಪ್ರಾಯದ ಹುಡುಗಿಯನ್ನು ಕಿಡ್‌ ನ್ಯಾಪ್‌ ಮಾಡಿದ ಆರೋಪದ ಮೇಲೆ ಇಲ್ಲಿನ ಹೆಡ್‌ ಕಾನ್‌ಸ್ಟೆಬಲ್‌ ಓರ್ವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮೇಲೆ ಆರೋಪಿ ಹೆಡ್‌ ಕಾನ್‌ಸ್ಟೆಬಲ್‌ ಅತ್ಯಾಚಾರ ನಡೆಸಿರುವ ಆರೋಪವೂ ಕೇಳಿಬಂದಿದೆ.

ಇಲ್ಲಿನ ಕಾಮಾಟಿಪುರ ಪೊಲೀಸ್‌ ಸ್ಟೇಶನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್‌ ಕಾನ್‌ಸ್ಟೆಬಲ್‌ ವಿರುದ್ಧ ಅಪಹೃತ ಹುಡುಗಿಯ ಸಹೋದರಿಯು ದೂರು ದಾಖಲಿಸಿದ್ದಳು. ತನ್ನ ತಂಗಿಯನ್ನು ಆರೋಪಿ ಹೆಡ್‌ ಕಾನ್‌ಸ್ಟೆಬಲ್‌ ಕಾರಿನಲ್ಲಿ ಅಪಹರಿಸಿ ಒಯ್ದಿರುವಾಗಿ ದೂರಿನಲ್ಲಿ ಹೇಳಲಾಗಿದೆ ಎಂದು ಕಾಮಾಟಿಪುರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಎಸ್‌ ಸುದರ್ಶನ್‌ ತಿಳಿಸಿದ್ದಾರೆ.

ಅಪಹೃತ ಬಾಲಕಿಯು ಕಾಮಾಟಿಪುರ ಪೊಲೀಸ್‌ ಠಾಣೆ ಸಮೀಪದ ಮನೆಯೊಂದರಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದಳು. ದೂರನ್ನು ಆಧರಿಸಿಕೊಂಡು ಪೊಲೀಸರು ಆರೋಪಿ ಹೆಡ್‌ ಕಾನ್‌ಸ್ಟೆಬಲ್‌ ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆತನಿಂದ ವಶಕ್ಕೆ ತೆಗೆದುಕೊಳ್ಳಲಾಗಿರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸುದರ್ಶನ್‌ ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಆರೋಪಿ ಹೆಡ್‌ ಕಾನ್‌ಸ್ಟೆಬಲ್‌ ವಿರುದ್ಧ ಅತ್ಯಾಚಾರದ ಆರೋಪ ಇದೆಯೇ ಎಂದು ಕೇಳಿದಾಗ, ಸುದರ್ಶನ್‌ ಅವರು, ಬಾಲಕಿಯ ಮನೆಯವರು ಕೊಟ್ಟಿರುವ ದೂರಿನಲ್ಲಿ ಅಂತಹ ಆರೋಪ ಇಲ್ಲ ಎಂದು ಉತ್ತರಿಸಿದರು. ಹಾಗಿದ್ದರೂ ಬಾಲಕಿಯ ವೈದ್ಯಕೀಯ ಪರೀಕ್ಷೆಯ ವರದಿಯನ್ನು ನೋಡಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದವರು ಹೇಳಿದರು.

No Comments

Leave A Comment