Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದಾತ ಮಂಗಳೂರು ಜೈಲಿನಿಂದ ಎಸ್ಕೇಪ್‌!

ಮಂಗಳೂರು: ಇಲ್ಲಿನ ಕಾರಾಗೃಹದಿಂದ ವಿಚಾರಣಾಧೀನ ಖೈದಿಯೊಬ್ಬ ಭದ್ರತಾ ಸಿಬಂದಿಗಳ ಕಣ್ಣು ತಪ್ಪಿಸಿ  ಪರಾರಿಯಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

2015 ರಲ್ಲಿ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪೋಸ್ಕೋ ಕಾಯ್ದೆಯಲ್ಲಿ ಬಂಧನಕ್ಕೊಳಗಾಗಿದ್ದ ಜಿನ್ನಪ್ಪ ಎಂಬಾತ ಪರಾರಿಯಾದ ಖೈದಿ. ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು.

ಉಪ್ಪಿನಂಗಡಿಯ ಪಡಂಗಡಿಯ ಗರ್ಡಾಡಿಯ ಬೆಳುವಾರು ಗುಡ್ಡದ ನಿವಾಸಿ ಎಂದು ತಿಳಿದು ಬಂದಿದೆ.

ಜೈಲು ಅಧಿಕಾರಿಗಳು ಪರಾರಿಯಾಗಿರುವ ಆತನ ವಶಕ್ಕಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜೈಲಿನಲ್ಲಿ ಜಿನ್ನಪ್ಪ ಅಡುಗೆ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಹೇಗೆ ಪರಾರಿಯಾದ ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಾಗಿದ್ದು, ಈ ಬಗ್ಗೆ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

No Comments

Leave A Comment