Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಮೆಸ್ಕಾಂ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಉಡುಪಿ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ, ಉಡುಪಿ ವೃತ್ತಕಛೇರಿ ವ್ಯಾಪ್ತಿಯ ಕಾರ್ಕಳ, ಬೈಂದೂರು, ಉಡುಪಿ ವಲಯದ ಮೆಸ್ಕಾಂನ ಮಹಿಳಾ ಸಿಬ್ಬಂದಿಗಳು ಮೆಸ್ಕಾಂ ವತಿಯಿಂದ ಉಡುಪಿಯ ಸ್ವದೇಶಿ ಹೋಟೆಲ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉಡುಪಿಯ ಪ್ರಸಿದ್ಧ ಮಹಿಳಾ ತಜ್ಞೆ ಡಾ. ಟಿ.ಎಂ.ಎ. ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ. ಪಾರ್ವತಿ ಭಟ್, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಾರ್ವತಿ ಭಟ್ಟರು ಮಹಿಳೆಯ ಆರೋಗ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.

ಆರೋಗ್ಯ ಮಾಹಿತಿಯನ್ನು ಮೆಸ್ಕಾಂನ ಮಹಿಳೆಯರೊಂದಿಗೆ ಸಂವಾದ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶ್ರೀಮತಿ ಭಾರತಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಶ್ರೀಮತಿ ಜ್ಯೋತ್ಸ್ನಾ ಪ್ರಭು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಶ್ರೀಮತಿ ಚಂದ್ರಿಕಾ ಹಿರಿಯ ಸಹಾಯಕಿ ಹಣಕಾಸು ವಿಭಾಗ, ಶ್ರೀಮತಿ ರುಕ್ಮಿಣಿ ಹಿರಿಯ ಸಹಾಯಕಿ, ಮೆಸ್ಕಾಂ ಉಡುಪಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

No Comments

Leave A Comment