Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಬಿಹಾರದಲ್ಲಿ ಎನ್ ಕೌಂಟರ್: 4 ಮಾವೋವಾದಿಗಳ ಹತ್ಯೆ

ನವಾಡ: ಬಿಹಾರ ರಾಜ್ಯದ ನವಾಡದಲ್ಲಿ ಕೋಬ್ರಾ 205 ಬೆಟಾಲಿಯನ್ ಭದ್ರತಾ ಪಡೆ ಎನ್ ಕೌಂಟರ್ ನಡೆಸಿದ್ದು, ನಾಲ್ವರು ಮಾವೋವಾದಿಗಳನ್ನು ಹತ್ಯೆ ಮಾಡಿದೆ.

ನವಾಡದ ಥಮ್ಕೋಲಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಎನ್ ಕೌಂಟರ್ ನಡೆಸಿದ್ದು, ಹತ್ಯೆಯಾದ ಮಾವೋವಾದಿಗಳನ್ನು ಅನಿಲ್ ಯಾದವ್, ರೈಜೇಶ್ ರವಿದಾಸ್ ಮತ್ತು ಚಂದನ್ ನೇಪಾಳಿ ಎಂದು ಗುರ್ತಿಸಲಾಗಿದೆ. ಮತ್ತೊಬ್ಬನ ಗುರ್ತಿಕೆ ಈ ವರೆಗೂ ತಿಳಿದುಬಂದಿಲ್ಲ. ಹತ್ಯೆಯಾಗಿರುವ ಮಾವೋವಾದಿಗಳು ಪ್ರದ್ಯುಮಾನ್ ಶರ್ಮಾ ಗ್ರೂಪ್’ಗೆ ಸೇರಿದ ಮಾವೋವಾದಿಗಳನ್ನು ತಿಳಿದುಬಂದಿದೆ.

ಹತ್ಯೆಯಾದ ಮಾವೋವಾದಿಗಲ ಬಳಿಯಿದ್ದ 1 ಎಕೆ 47, 1 ಎಸ್ಎಲ್ಆರ್, ಮತ್ತು 2 ಇನ್ಸಾಸ್ ರೈಫಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಔರಂಗಾಬಾದ್’ನ ಗೊಹ್ ಟೌನ್ ಪೊಲೀಸ್ ಕ್ಯಾಂಪ್ ಮೇಲೆ 2013 ಜುಲೈ 17 ರಂದು ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ನಾಗರೀಕರು ಸಾವನ್ನಪ್ಪಿದ್ದರು. ಪ್ರಸ್ತುತ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವ ಈ ಮಾವೋವಾದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ಎನ್ ಕೌಂಟರ್ ನಲ್ಲಿ ಇನ್ನೂ ಕೆಲ ಮಾವೋವಾದಿಗಳು ಗಾಯಗೊಂಡಿದ್ದು, ಸ್ಥಳದಲ್ಲಿ ಈಗಲೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment