Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ – ಎ.ಎಸ್.ಎನ್ ಹೆಬ್ಬಾರ್

ಉಡುಪಿ:ಪ್ರತಿಕೂಲ ಪರಿಸ್ಥಿತಿಯನ್ನೂ ನಮಗೆ ಬೇಕಾದಂತೆ ಪರಿವರ್ತಿಸುವ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು . ವೃತ್ತಿ ಯಾವುದೇ ಇರಲಿ, ಅದರೊಂದಿಗೆ ನಮ್ಮ ಪ್ರತಿಭೆಗಳಿಗೂ ಅವಕಾಶ ಕೊಟ್ಟುಕೊಳ್ಳಬೇಕು. ನಮ್ಮತನವನ್ನು ಕಂಡುಕೊಳ್ಳಬೇಕು ಎಂದು  ನ್ಯಾಯವಾದಿ, ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.

ಉಡುಪಿ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ‌ ಮಾತನಾಡಿ, ಪ್ರಪಂಚದ ಅತ್ಯಂತ ಪುರಾತನ ಭಾಷೆಗಳಲ್ಲಿ ಕನ್ನಡ ಒಂದು.‌ ಭಾಷಾಭಿಮಾನ, ದೇಶಾಭಿಮಾನವನ್ನು ಇಂದಿನ ಯುವಕರು ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಅಧಿಕಾರಿ, ವಾಣಿಜ್ಯ ಶಾಸ್ತ ವಿಭಾಗ ಮುಖ್ಯಸ್ಥ ಡಾ. ಸುರೇಶ್ ರಮಣ ಮಯ್ಯ ಮಾತನಾಡಿ, ವ್ಯಕ್ತಿತ್ವ ಮನುಷ್ಯನ ಭವಿಷ್ಯವನ್ನು ರೂಪಿಸುತ್ತದೆ. ಬೆಳವಣಿಗೆಗೆ ನಂಬಿಕೆ ಮುಖ್ಯ ಎಂದರು.‌

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್ ಮಾತನಾಡಿ ನಮ್ಮ ದೌರ್ಬಲ್ಯಗಳನ್ನು ಅರಿತು ಅವುಗಳನ್ನು ನಮ್ಮ ಶಕ್ತಿಯನ್ನಾಗಿ ಬದಲಾಯಿಸಿಕೊಳ್ಳಬೇಕು, ಅವಕಾಶವನ್ನಾಗಿಸಬೇಕು ಎಂದರು.

ಸಂಘದ ಅಧ್ಯಕ್ಷ ನಿಖಿಲ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಲ್ಲವಿ ಭಾಗವತ್ ವಾರ್ಷಿಕ ವರದಿ ವಾಚಿಸಿದರು. ಅಕ್ಷಯ್ ಪೂಜಾರಿ ವಂದಿಸಿದರು. ರಿಯಾ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

No Comments

Leave A Comment