Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ವಂಚನೆ ಪ್ರಕರಣದಲ್ಲಿ ತಮಿಳು ನಟ ‘ಪವರ್ ಸ್ಟಾರ್’ ಶ್ರೀನಿವಾಸನ್ ಬಂಧನ

ನವದೆಹಲಿ: ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚನೆ ಪ್ರಕರಣದಲ್ಲಿ ತಮಿಳು ನಟ ಹಾಗೂ ನಿರ್ದೇಶಕ ಪವರ್ ಸ್ಟಾರ್ ಶ್ರೀನಿವಾಸನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸನ್ ಅಲಿಯಾಸ್ ಪವರ್ ಸ್ಟಾರ್  ನನ್ನು ಪೊಲೀಸರು ಚೆನ್ನೈ ನಲ್ಲಿ ಬಂಧಿಸಿದ್ದಾರೆ. ಆದರೆ ಆತನನ್ನು ದೆಹಲಿಗೆ ಕರೆತರಬೇಕೆಂದು ಚೆನ್ನೈ ಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಆರ್ಥಿಕ ಅಪರಾಧ ದಳದ ಜಂಟಿ ಆಯುಕ್ತ ಅರುಣ್ ಕಂಪಾನಿ ಹೇಳಿದ್ದಾರೆ.

ದೆಹಲಿ ಮೂಲದ ಬ್ಯುಸಿನೆಸ್ ಮ್ಯಾನ್ ಒಬ್ಬರು ದಾಖಲಿಸಿರುವ ದೂರಿನ ಪ್ರಕಾರ, 2010ರ ಡಿಸೆಂಬರ್ ನಲ್ಲಿ ಶ್ರೀನಿವಾಸನ್ 1 ಸಿವಾರ ಕೋಟಿ ರು. ರು ಸಾಲ ಕೊಡಿಸುವುದಾಗಿ ಹೇಳಿ 5 ಕೋಟಿ ರು. ಹಣವನ್ನು ಲಂಚವಾಗಿ ಪಡೆದಿದ್ದಾನೆ. ಆದರೆ ಇದುವರೆಗೂ ಪಡೆದ ಹಣವನ್ನು  ಹಣ ನೀಡಿಲ್ಲ  ಜೊತೆಗೆ ಸಾಲ ಕೂಡ ಕೊಡಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಕಂಪಾನಿ ಹೇಳಿದ್ದಾರೆ.

ಆರೋಪಿ ಶ್ರೀನಿವಾಸನ್ ನನ್ನು 2013 ರ ಜೂನ್ ನಲ್ಲಿ ಬಂಧಿಸಲಾಗಿತ್ತು, ಸೆಪ್ಟಂಬರ್ 2013 ರಲ್ಲಿ ಆತ ಮಧ್ಯಂತರ ಜಾಮೀನು ಪಡೆದಿದ್ದ. ಏಪ್ರಿಲ್ 2015 ರಂದು ತಾನು ಅಪರಾಧಿ ಎಂದು ಘೋಷಿಸಿಕೊಂಡಿದ್ದನು ಎಂದು ಅವರು ತಿಳಿಸಿದ್ದಾರೆ.ವ್ಯಾಪಾರಿಯಿಂದ ಪಡೆದ ಹಣವನ್ನು ಆತ ಸಿನಿಮಾ ನಿರ್ಮಾಣಕ್ಕಾಗಿ ಬಳಸಿಕೊಂಡಿದ್ದಾನೆ, ವೃತ್ತಿಯಲ್ಲಿ ಮೂಲತಃ ಆ್ಯಕ್ಯು ಪಂಕ್ಚರ್ ವೈದ್ಯನಾಗಿರುವ ಶ್ರೀನಿವಾಸ್ 12 ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾನೆ. ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.

ಆರೋಪಿ ಶ್ರೀನಿವಾಸ್ ವಿರುದ್ಧ ವಂಚನೆ ಪ್ರಕರಣದಲ್ಲಿ 8 ಕೇಸುಗಳು ದಾಖಲಾಗಿವೆ. ದೆಹಲಿ ಮತ್ತು ಚೆನ್ನೈ ಅಪರಾಧ ವಿಭಾಗದ ಪೊಲೀಸರು ಆತನ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment