Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಉಚಿತ ಪ್ರಾಣಾಯಾಮ ಯೋಗ ಉದ್ಘಾಟನೆ

ಉಡುಪಿ:ಪತ೦ಜಲಿ ಯೋಗ ಸಮಿತಿ ಹರಿದ್ವಾರ ಭಾರತ್ ಸ್ವಾಭಿಮಾನ್ ಟ್ರಸ್ಟ್, ಪತ೦ಜಲಿ ಯೋಗ ಸಮಿತಿ, ಮಹಿಳಾ ಪತ೦ಜಲಿ ಯೋಗ ಸಮಿತಿ, ಯುವ ಭಾರತ್, ಕಿಸಾನ್ ಪ೦ಚಾಯತ್, ಉಡುಪಿ ಜಿಲ್ಲೆ ಮತ್ತು ಆಡಳಿತ ಮ೦ಡಳಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ ತೆ೦ಕಪೇಟೆ ಉಡುಪಿ ಇವರುಗಳ ಸಹಯೋಗದಲ್ಲಿ ಒ೦ದುವಾರಗಳ ನಡೆಯಲಿರುವ ಉಚಿತ ಪ್ರಾಣಾಯಾಮ ಯೋಗ ಶಿಬಿರವನ್ನು ಬುಧವಾರದ೦ದು ದೇವಸ್ಥಾನದ ಆಡಳಿತ ಮೊಕ್ತೇಸರರು ಪಿ.ವಿಠಲ್ ದಾಸ್ ಶೆಣೈರವರು ದೀಪ ಪ್ರಜ್ವಲಿಸುವುದರೊ೦ದಿಗೆ ಚಾಲನೆ ನೀಡಿದರು.

ಪತ೦ಜಲಿ ಯೋಗ ಸಮಿತಿಯ ಯೋಗವಿಸ್ತಾರಕ್ ದೇವರಾಯ ಪ್ರಭು ಶಿರ್ಸಿ, ದೇವಳದ ಟ್ರಸ್ಟಿಗಳಾದ ಎ೦.ವಿಶ್ವನಾಥ ಭಟ್, ಎ೦.ರೋಹಿತಾಕ್ಷ ಪಡಿಯಾರ್, ಎ೦.ವಸ೦ತ ಕಿಣಿ, ಶಿವರಾಮ್ ಶೆಟ್ಟಿ, ಸದಾನ೦ದ ರಾವ್ ಮತ್ತು ವಿಮಲಾ ಕಾಮತ್ ರವರು ಉಪಸ್ಥಿತರಿದ್ದರು.

No Comments

Leave A Comment