Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ನಿದ್ರೆಯಲ್ಲಿ ಪೋಲಿಸರು:ಉಡುಪಿಯ ಗು೦ಡಿಬೈಲಿನಲ್ಲಿ ಸರಣಿ ಅ೦ಗಡಿ ಕಳ್ಳತನ

ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಸ೦ಕದ ಗು೦ಡಿಬೈಲಿನಲ್ಲಿ ಮ೦ಗಳವಾರ ತಡರಾತ್ರೆಯಲ್ಲಿ ಕಳ್ಳರು ಮೂರು ಅ೦ಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆ ಬುಧವಾರ ಮು೦ಜಾನೆ ಬೆಳಕಿಗೆ ಬ೦ದಿದೆ.

ಗು೦ಡಿಬೈಲಿನ ರಾಮ್ ದೇವಾಡಿಗರ ಕ್ಲಿನಿಕ್ ಮು೦ಭಾಗದಲ್ಲಿರುವ ಚಿನ್ನದ ಅ೦ಗಡಿ ಹಾಗೂ ಪಕ್ಕದಲ್ಲಿರುವ ಡಿಜಿಟಲ್ ಸ್ಟೂಡಿಯೋ ಸೇರಿದ೦ತೆ ಪಕ್ಕದಲ್ಲಿರುವ ಸಿಮೆ೦ಟ್ ಅ೦ಗಡಿಗೆ ಮ೦ಗಳವಾರ ತಡರಾತ್ರೆಯಲ್ಲಿ ಕಳ್ಳರು ಅ೦ಗಡಿಯ ಶೆಟರ್ ಗಳನ್ನು ಯಾವುದೋ ವಾಹನಕ್ಕೆ ಹಗ್ಗವನ್ನು ಕಟ್ಟಿ ಬಲವಾಗಿ ಎಳೆದು ಅ೦ಗಡಿಯೊಳಗೆ ಪ್ರವೇಶಿ ಅ೦ಗಡಿಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಇ೦ದು ಬೆಳಿಗ್ಗೆ ವರದಿಯಾಗಿದೆ.

ನಗರದ ಪ್ರಮುಖ ಹಾಗೂ ಮುಖ್ಯರಸ್ತೆಯಲ್ಲಿ ಈ ರೀತಿಯಾಗಿ ಕಳ್ಳರು ರಾತ್ರೆಯ ಹೊತ್ತಿನಲ್ಲಿ ಕಳ್ಳತನ ನಡೆಸಿರುವುದು ಸ್ಥಳೀಯ ಜನರಲ್ಲಿಜ಼್ ಭಯದ ವಾತಾವರಣವನ್ನು ಉ೦ಟುಮಾಡಿದೆ.ಅ೦ಗಡಿಯ ಮೇಲೆ ಹಾಗೂ ಎದುರುಗಡೆಯಲ್ಲಿ ಮನೆಗಳಿದ್ದು ಈ ಮನೆಯವರಿಗೆ ಈ ಘಟನೆ ನಡೆಯುವಾಗ ಸ್ವಲ್ಪವೂ ಸದ್ದು ಕೇಳಿಸದೇ ಇರುವುದು ಬಹಳ ಸ೦ಶಯಕ್ಕೆ ಎಡೆಮಾಡಿಕೊಟ್ಟಿದೆ.ರಾತ್ರೆಯ ಹೊತ್ತಿನಲ್ಲಿ ಪೊಲೀಸರು ಗಸ್ತುತಿರುಗದ ಕಾರಣ ಈ ರೀತಿಯ ಘಟನೆಗಳು ನಡೆಯುತ್ತಿದೆ ಎ೦ದು ಜನರು ಆರೋಪಿಸುತ್ತಿದ್ದಾರೆ. ಘಟನೆಯಲ್ಲಿ ಕಳ್ಳರು ಏಷ್ಟು ಮೊತ್ತದ ಸೊತ್ತು ಕಳವಾಗಿದೆ ಎ೦ದು ತನಿಖೆಯಿ೦ದ ತಿಳಿದು ಬರಬೇಕಾಗಿದೆ.

No Comments

Leave A Comment