Log In
BREAKING NEWS >
ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ ಪಣಂಬೂರು ಬಳಿಯಲ್ಲಿ ನಡೆದಿದೆ.

ರಾಮೇಶ್ವರಂ: ಭಾರತೀಯ ಮೀನುಗಾರರ ಮೇಲೆ ಲಂಕಾ ಸೈನಿಕರಿಂದ ಗುಂಡಿನ ದಾಳಿ: ಓರ್ವ ಬಲಿ

ರಾಮೇಶ್ವರಂ: ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳದ ಸೈನಿಕರು ಏಕಾಏಕಿ ಗುಂಡಿನ ದಾಳಿ ನಡೆಸಿ ಒಬ್ಬ ಮೀನುಗಾರನನ್ನು ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ  ಸಮುದ್ರದ ಗಡಿಯಲ್ಲಿ  ಈ ಘಟನೆ ನಡೆದಿದೆ.   ಮೃತ ಮೀನುಗಾರನನ್ನು ತಮಿಳುನಾಡಿನ ರಾಮೇಶ್ವರದ ಬ್ರಿಡೋ  ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಮೀನುಗಾರರಿಗೆ ಗಾಯಗಳಾಗಿವೆ.

 ಲಂಕಾದ ನೌಕಾದಳ ಸೈನಿಕರು  ಭಾರತೀಯ ಮೀನುಗಾರರು ಮೀನು ಹಿಡಿಯುವ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ರಾಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯ ಅಧಿಕಾರಿಗಳು ಪ್ರಧಾನಿ ಕಚೇರಿ ಹಾಗೂ ವಿದೇಶಾಂಗ ಇಲಾಖೆಗೆ ಪ್ರಕರಣದ ಮಾಹಿತಿ ನೀಡಿದ್ದಾರೆ.

No Comments

Leave A Comment