Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಹೃದಯಾಘಾತ ಹಿರಿಯ ನಟಿ ಪದ್ಮಾ ಕುಮುಟಾ ನಿಧನ

ಬೆಂಗಳೂರು: ಹಿರಿಯ ನಟಿ ಪದ್ಮಾ ಕುಮುಟಾ (58) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು.

ನಗರದಲ್ಲಿ ನಡೆಯುತ್ತಿದ್ದ ‘ಮಹಾನದಿ’ ಧಾರವಾಹಿ ಚಿತ್ರೀಕರಣ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.  ಪದ್ಮಾ ಅವರು ‘ಚೋಮನ ದುಡಿ’ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ವರನಟ ರಾಜ್‌ಕುಮಾರ್‌ ಅವರ ‘ದೇವತಾ ಮನುಷ್ಯ’ ಮತ್ತು ಶಿವರಾಜ್‌ಕುಮಾರ್‌ ಅವರ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೆ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು.

No Comments

Leave A Comment