Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಗೋಡೆಗೆ ಜೀಪ್‌ ಢಿಕ್ಕಿ : ಇಬ್ಬರು ನರ್ಸರಿ ಮಕ್ಕಳು, ಚಾಲಕ ಸಾವು

ಕೊಚ್ಚಿ : ಕೋಟ್ಟಯಂ ಜಿಲ್ಲೆಯ ಪುತ್ತುವೇಲಿ ಎಂಬಲ್ಲಿಂದು ಸೋಮವಾರ ಬೆಳಗ್ಗೆ ಜೀಪ್‌ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ನರ್ಸರಿ ಶಾಲಾ ಮಕ್ಕಳು ಮತ್ತು ಜೀಪ್‌ ಚಾಲಕ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.ಇತರ 10 ಮಕ್ಕಳು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೀಪು ಶಾಲಾ ಮಕ್ಕಳನ್ನು ಎರ್ನಾಕುಳಂ ಜಿಲ್ಲೆಯ  ಕೂತ್ತಟ್ಟುಕುಳಂ ಎಂಬಲ್ಲಿನ ಮೇರಿಗಿರಿ ಪಬ್ಲಿಕ್‌ ಸ್ಕೂಲ್‌ಗೆ ಒಯ್ಯುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಜೀಪು ಇದ್ದಕ್ಕಿದ್ದಂತೆಯೇ ಗೋಡೆ ಢಿಕ್ಕಿ ಹೊಡೆಯಿತು.

ಈ ದುರ್ಘ‌ಟನೆಯಲ್ಲಿ ಮೃತಪಟ್ಟಿರುವ ಇಬ್ಬರು ಮಕ್ಕಳು ಯುಕೆಜಿಯಲ್ಲಿ ಕಲಿಯುತ್ತಿದ್ದರು. ಗಾಯಗೊಂಡ ಮಕ್ಕಳಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಿದೆ.

ಗಾಯಾಳು ಮಕ್ಕಳನ್ನು ಎರ್ನಾಕುಳಂ ಮತ್ತು ಕೋಟ್ಟಯಂ ಜಿಲ್ಲೆಗಳಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment