Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ದರ್ಶನ್ ದೋಸ್ತಿ ಟ್ವೀಟ್ ಗೆ ನೋ ಕಮೆಂಟ್ಸ್ ಎಂದ ಕಿಚ್ಚ ಸುದೀಪ್!

ತುಮಕೂರು/ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವಿನ ಸ್ನೇಹದ ಕೊಂಡಿ ಕಳಚಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಏತನ್ಮಧ್ಯೆ ಸುದೀಪ್ ದೋಸ್ತಿಗೆ ಸಂಬಂಧಿಸಿದಂತೆ ದರ್ಶನ್ ಮಾಡಿರುವ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಲು ಸುದೀಪ್ ನಿರಾಕರಿಸಿದ್ದಾರೆ.

ಸೋಮವಾರ ತುಮಕೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಆಗಮಿಸಿದ್ದ ಸುದೀಪ್, ತನ್ನ ಅಭಿನಯದ ಹೆಬ್ಬುಲಿ ಚಿತ್ರವನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.

ಚಿತ್ರಮಂದಿರದಿಂದ ಹೊರಬಂದು ಸುದ್ದಿಗಾರರ ಜೊತೆ ಹೆಬ್ಬುಲಿ ಚಿತ್ರದ ಬಗ್ಗೆ ಅಭಿಮಾನಿಗಳು ತೋರುತ್ತಿರುವ ಅಭಿಮಾನದ ಕುರಿತು ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ದರ್ಶನ್ ಟ್ವೀಟ್ ಬಗ್ಗೆ ಕೇಳುತ್ತಿದ್ದಂತೆಯೇ ಸುದೀಪ್, ನೋ ಕಮೆಂಟ್ಸ್ ಎಂದು ಅಲ್ಲಿಂದ ತೆರಳಿದರು.

No Comments

Leave A Comment