Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಅದೇ ರಾಗ, ಅದೇ ಹಾಡು! ಬಿಎಸ್ ವೈ ವಿರುದ್ಧ ಮತ್ತೆ ಈಶ್ವರಪ್ಪ ಅಸಮಾಧಾನ

ಬೆಂಗಳೂರು:ರಾಯಣ್ಣ ಬ್ರಿಗೇಡ್ ಹಾಗೂ ಪದಾಧಿಕಾರಿಗಳ ವಿಚಾರದಲ್ಲಿನ ಜಟಾಪಟಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಸಂಧಾನ ನಡೆದಿದ್ದರೂ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ನಡುವಿನ ಜಂಗೀಕುಸ್ತಿ ಅದೇ ರಾಗ, ಅದೇ ಹಾಡು ಎಂಬಂತೆ ಮತ್ತೆ ಮುಂದುವರಿದಿದೆ.

ಶನಿವಾರ ಆನಂದ ರಾವ್ ಸರ್ಕಲ್ ಸಮೀಪ ನಡೆದ ರಾಯಣ್ಣ ಬ್ರಿಗೇಡ್ ಸಮಾರಂಭದಲ್ಲಿ ಭಾಗವಹಿಸಿದ್ದ ನಂತರ ಮಾತನಾಡಿದ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಅವರು ಅಮಿತ್ ಶಾ ಅವರ ಸೂಚನೆಯಂತೆ ಫೆ.10ರೊಳಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಿ ಎಂದು ಸೂಚಿಸಿದ್ದರು. ಆದರೆ ಬಿಎಸ್ ವೈ ಇನ್ನೂ ಯಾಕೆ ಸಭೆ ಕರೆದಿಲ್ಲ ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿಯಲ್ಲಿ ಅಸಮಾಧಾನ, ಗೊಂದಲ ಇರುವುದು ನಿಜ. ನಿನ್ನೆ ಸೊಗಡು ಶಿವಣ್ಣ ನೇತೃತ್ವದಲ್ಲಿ ಸಭೆ ನಡೆದಿದೆ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ಮತ್ತೊಮ್ಮೆ ಈ ವಿಚಾರ ತರುತ್ತೇನೆ. ಪದಾಧಿಕಾರಿಗಳ ಗೊಂದಲ ಬಗೆಹರಿಸಬೇಕಿದೆ ಎಂದರು.

ಅಮಿತ್ ಶಾ ಅವರು ನನಗೆ ರಾಯಣ್ಣ ಬ್ರಿಗೇಡ್ ನಿಲ್ಲಿಸಿ ಎಂದು ಹೇಳಿಲ್ಲ, ಅದಕ್ಕೂ, ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಆ ನಿಟ್ಟಿನಲ್ಲಿ ರಾಯಣ್ಣ ಬ್ರಿಗೇಡ್ ಸಭೆ, ಸಮಾವೇಶಗಳಲ್ಲಿ ನಾನು ಭಾಗವಹಿಸುತ್ತೇನೆ ಎಂದು ಈಶ್ವರಪ್ಪ ಹೇಳುವ ಮೂಲಕ ಬಿಎಸ್ ವೈಗೆ ಸೆಡ್ಡು ಹೊಡೆದಿದ್ದಾರೆ.

No Comments

Leave A Comment