Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಾಪಾರಸ್ಥ ಹರ್ನಿಶ್ ಪಟೇಲ್ ಹತ್ಯೆ

ನ್ಯೂಯಾರ್ಕ್: ಅಮೆರಿಕದ ನಿವೃತ್ತ ಯೋಧನಿಂದ ಸಾವಿಗೀಡಾದ ಭಾರತೀಯ ಮೂಲದ ಶ್ರೀನಿವಾಸ್ ಕುಚ್ಚಿಭೋಟ್ಲಾ ಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಅಂತಹುದೇ ಮತ್ತೊಂದು ಘಟನೆ ದಕ್ಷಿಣ ಕ್ಯಾರೋಲಿನಾದಲ್ಲಿ  ವರದಿಯಾಗಿದೆ.

ಭಾರತೀಯ ಮೂಲದ ಉದ್ಯಮಿ ಹರ್ನಿಶ್ ಪಟೇಲ್ ಎಂಬುವವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿಕೊಂದು ಹಾಕಿದ್ದಾರೆ. ಗುರುವಾರ ರಾತ್ರಿ ಸುಮಾರು 11.24ರಲ್ಲಿ ತನ್ನ ಅಂಗಡಿಯನ್ನು ಮುಚ್ಚಿದ್ದ ಹರ್ನಿಶ್ ಪಟೇಲ್ ಬಳಿಕ  ಮನೆಯತ್ತ ಹೆಜ್ಜೆ ಹಾಕಿದ್ದ. ಈ ವೇಳೆ ಕೆಲ ದುಷ್ಕರ್ಮಿಗಳು ಲ್ಯಾಂಕಸ್ಟರ್  ಬಳಿ ಆತನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಹರ್ನಿಶ್ ಪಟೇಲ್ ಹತ್ಯೆ ಜನಾಂಗೀಯ ದಾಳಿಯೇ ಅಥವಾ  ಉದ್ದೇಶಪೂರ್ವಕಾಗಿ ಆತನನ್ನು ಕೊಲ್ಲಲಾಗಿದೆಯೇ ಎಂಬುದು ತಿಳಿದಿಲ್ಲ. ಆದರೆ ಹರ್ನಿಶ್ ರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಕಳೆದ ಬುಧವಾರ ಅಮೆರಿಕದ ಕ್ಯಾನ್ಸಾಸ್ ನಲ್ಲಿ ಶ್ರೀನಿವಾಸ್ ಕುಚ್ಚಿ ಭೊಟ್ಲಾ ಅವರನ್ನು ಅಮೆರಿಕದ ನಿವೃತ್ತ ಯೋಧನೋರ್ವ ಗುಂಡು ಹಾರಿಸಿ ಹತ್ಯೆಗೈದಿದ್ದ. ಘಟನೆಯಲ್ಲಿ ಶ್ರೀನಿವಾಸ್ ಅವರನ್ನು ರಕ್ಷಿಸಲು ಬಂದ ಇಯಾನ್ ಗ್ರಿಲ್ಲಾಟ್  ಎಂಬ  ಅಮೆರಿಕ ಪ್ರಜೆ ಕೂಡ ಗಂಭೀರವಾಗಿ ಗಾಯಗೊಂಡಿದ್ದ. ಶ್ರೀನಿವಾಸ್ ಹತ್ಯೆಗೂ ಮುನ್ನ ಹತ್ಯೆಗೈದ ನಿವೃತ್ತ ಯೋಧ ನನ್ನ ದೇಶ ಬಿಟ್ಟು ತೊಲಗು ಎಂದು ಕಿರುಚಾಡಿದ್ದ.

ಈ ವಿಚಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತುಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ರೀನಿವಾಸ್ ಹತ್ಯೆಯನ್ನು ಖಂಡಿಸಿದ್ದರು.

ಈ ಹೇಳಿಕೆ ಹೊರಬಿದ್ದ 2ನೇ ದಿನವೇ ಮತ್ತೋರ್ವ ಭಾರತೀಯ ಮೂಲದ ವ್ಯಕ್ತಿಯನ್ನು ಅಮೆರಿಕದಲ್ಲಿ  ಹತ್ಯೆ ಮಾಡಿರುವುದು ಭಾರಿ  ಅತಂಕಕ್ಕೆ ಕಾರಣವಾಗಿದೆ.

No Comments

Leave A Comment