Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಬೆಂಗಳೂರು ಟೆಸ್ಟ್: ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್‍ಗೆ ಟೀಂ ಇಂಡಿಯಾ ಆಲೌಟ್

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 189 ರನ್ ಗಳಿಗೆ ಆಲೌಟ್ ಆಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 189 ರನ್ ಗಳಿಗೆ ಸರ್ವಪತನ ಕಂಡಿದೆ. ಆರಂಭಿಕರಾಗಿ ಬಂದ ಕೆಎಲ್ ರಾಹುಲ್ 90 ರನ್ ಗಳಿಸಿ ಔಟಾಗಿದ್ದು ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವುದರಿಂದ ತಪ್ಪಿಸಿದರು.

ಆರಂಭಿಕರಾಗಿ ಬಂದ ಅಭಿನವ್ ಮುಕುಂದ್ ಶೂನ್ಯಕ್ಕೆ ಔಟಾದರು, ಬಳಿಕ ಬಂದ ಚೇತೇಶ್ವರ ಪೂಜಾರ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು 17 ರನ್ ಗಳಿಸಿದ್ದಾಗ ನಾಥನ್ ಲ್ಯಾನ್ ಎಸತೆದಲ್ಲಿ ಹ್ಯಾಂಡ್ಸ್ ಕೂಮ್ಬ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ವಿರಾಟ್ ಕೊಹ್ಲಿ 12 ರನ್ ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ತಾಳ್ಮೆಯ ಆಟಗಾರ ಅಜಿಂಕ್ಯ ರಹಾನೆ 17, ಕರುಣ್ ನಾಯರ್ 26, ಆರ್ ಅಶ್ವಿನ್ 7, ವೃದ್ಧಿಮಾನ್ ಸಾಹಾ 1, ರವೀಂದ್ರ ಜಡೇಜಾ 3 ರನ್ ಗಳಿಸಿ ಔಟಾಗಿದ್ದಾರೆ.

ಆಸ್ಟ್ರೇಲಿಯಾ ಪರ ನಾಥನ್ ಲ್ಯಾನ್ 8, ಸ್ಟಾರ್ಕ್ ಓ ಕೇಫೆ ತಲಾ 1 ವಿಕೆಟ್ ಪಡೆದಿದ್ದಾರೆ

No Comments

Leave A Comment