Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

“ಮೊದಲ ತೊದಲು” ಕವನ ಸಂಕಲನ ಬಿಡುಗಡೆ

ಶ್ರೀ ಕೃಷ್ಣ ಮಠದಲ್ಲಿ, ಸರ್ಕಾರಿ ಬಾಲಮಂದಿರದ ವಿದ್ಯಾರ್ಥಿನಿ ಕುಮಾರಿ ಆರತಿಯು ಬರೆದಿರುವ “ಮೊದಲ ತೊದಲು” ಎನ್ನುವ ಕವನ ಸಂಕಲನವನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಗ್ರೇಸಿ, ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯೆ ಡಾ.ವನಿತಾ ತೊರವಿ, ಪ್ರಕಾಶಕರಾದ ಉಪೇಂದ್ರ ಸೋಮಯಾಜಿ, ಸಂಯೋಜಕರಾದ ಬಿ.ಕೆ.ನಾರಾಯಣ್ ಉಪಸ್ಥಿತರಿದ್ದರು.

ಆರತಿ ಕವನ ವಾಚಿಸಿದ ನಂತರ ಸ್ವಾಮೀಜಿಯವರು ಸನ್ಮಾನಿಸಿ ಆಶೀರ್ವದಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.

No Comments

Leave A Comment