Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಉಡುಪಿ ಶ್ರೀಕೃಷ್ಣ ತಿರುಗಿರುವುದು ಸುಳ್ಳು: ಅದಮಾರು ವಿಶ್ವಪ್ರಿಯ ಸ್ವಾಮೀಜಿ

ಕಾಪು (ಪಡುಬಿದ್ರಿ): ಉಡುಪಿ ಶ್ರೀ ಕೃಷ್ಣ ಮಠದಲ್ಲಿರುವ ಕೃಷ್ಣನ ಮೂರ್ತಿ ತಿರುಗಿರುವುದು ಸುಳ್ಳು. ಆದರೆ, ಆ ಮೂರ್ತಿಯನ್ನು ಮಠದಲ್ಲಿ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಅದಮಾರು ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.

ಕಾಪುವಿನ ಉಳಿಯಾರು ಭಜನಾ ಮಂದಿರದಲ್ಲಿ ಅವರು ಈ ಮಹತ್ವದ ಹೇಳಿಕೆ ನೀಡಿದರು. ಕೃಷ್ಣನ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಪ್ರತಿಷ್ಠೆ ಮಾಡಿರುವವರೆ ಬರೆದಿಟ್ಟಿದ್ದಾರೆ. ಕೃಷ್ಣನ ಮೂರ್ತಿ ತಿರುಗಿರುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಅವರು ಹೇಳಿದರು.

ಪಾಶ್ಚಿಮಾತ್ಯದಿಂದ ತಾಳದ ಶಬ್ದ ಶುರುವಾದಾಗ ಅದನ್ನು ಕೇಳುವುದಕ್ಕೆ ಕೃಷ್ಣ ತಿರುಗಿದ್ದಾನೆ. ಈ ಪಾಶ್ಚಿಮಾತ್ಯರಿಗೆ ತಾಳವನ್ನು ಕೊಟ್ಟವರು ನಾವೆ ಎಂದು ಸ್ವಾಮೀಜಿ ಹೇಳಿದರು.

No Comments

Leave A Comment