Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು 5 ಕಿ.ಮೀ ಈಜಿದ ಕಾಲೇಜು ವಿದ್ಯಾರ್ಥಿ ಗಿನ್ನಿಸ್ ಸನಿಹ!

ನಾಗಪಟ್ಟಿಣಂ(ತಮಿಳುನಾಡು): ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು ಬರೋಬ್ಬರಿ 5 ಕಿ.ಮೀ ಈಜುವ ಮೂಲಕ ಕಾಲೇಜು ವಿದ್ಯಾರ್ಥಿಯೊಬ್ಬ ಗಿನ್ನಿಸ್ ದಾಖಲೆ ಬರೆಯುವ ಸನಿಹದಲ್ಲಿದ್ದಾನೆ.

ಕಾಲೇಜು ವಿದ್ಯಾರ್ಥಿ 19 ವರ್ಷದ ಶಬರಿನಾಥನ್ ಬಂಗಾಳ ಕೊಲ್ಲಿ ಸಮುದ್ರ ತೀರದಲ್ಲಿ 2 ಗಂಟೆ, 20 ನಿಮಿಷ 48 ಸೆಕೆಂಡ್ ಗಳಲ್ಲಿ ಕ್ರಮಿಸಿದ ಎಂದು ಜಿಲ್ಲಾ ಕ್ರೀಡಾಧಿಕಾರಿ ತಿಳಿಸಿದ್ದಾರೆ.

ಈ ಸಾಧನೆಯ ವಿವರವನ್ನು ಗಿನ್ನಿಸ್ ಸಮಿತಿಗೆ ಕಳುಹಿಸಲಾಗಿದ್ದು ದಾಖಲೆ ಇನ್ನಷ್ಟೆ ಖಚಿತವಾಗಬೇಕಿದೆ. ಈ ದಾಖಲೆ ಸದ್ಯ 37 ವರ್ಷದ ಗೋಪಾಲ್ ಖಾರ್ವಿ ಅವರ ಹೆಸರಿನಲ್ಲಿದೆ. 2013ರಲ್ಲಿ 3.07 ಕಿ,ಮೀ ದೂರವನ್ನು ಕೈ ಮತ್ತು ಕಾಲಿಗೆ ಹಗ್ಗ ಬಿಗಿದು 2 ಗಂಟೆ 43 ನಿಮಿಷದಲ್ಲಿ ಮಲ್ಪೆ ತೀರದಲ್ಲಿ ಈಜಿ ಗಿನ್ನಿಸ್ ದಾಖಲೆ ಮಾಡಿದ್ದರು.

No Comments

Leave A Comment