Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಕೇರಳ ಸಿಎಂ ತಲೆಗೆ ರೂ.1 ಕೋಟಿ ಇನಾಮು ಹೇಳಿಕೆ: ಚಂದ್ರಾವತ್ ವಿರುದ್ಧ ಎಫ್ಐಆರ್ ದಾಖಲು

ಇಂದೋರ್: ಕೇರಳ ರಾಜ್ಯ ಮುಖ್ಯಮಂತ್ರಿ ತಲೆ ಕಡಿದವರಿಗೆ ರೂ.1 ಕೋಟಿ ಬಹುಮಾನ ನೀಡುವುದಾಗಿ ಹೇಳಿಕೆ ನೀಡಿದ್ದ ಆರ್’ಎಸ್ಎಸ್ ನಾಯಕ ಕುಂದನ್ ಚಂದ್ರಾವತ್ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ಶನಿವಾರ ತಿಳಿದುಬಂದಿದೆ.

ಉಜ್ಜಯಿನಿಯ ಶಹೀದ್ ಪಾರ್ಕ್’ನಲ್ಲಿ ಅರ್’ಎಸ್ಎಸ್ ಹಮ್ಮಿಕೊಂಡಿದ್ದ ಸಭೆಯೊಂದರಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶದ ಸ್ಥಳೀಯ ಆರ್’ಎಸ್ಎಸ್ ನಾಯಕ ಕುಂದನ್ ಚಂದ್ರಾವತ್ ಅವರು, ಹಿಂದೂಪರ ಸಂಘಟನೆಗಳ ಪ್ರತಿ ರೋಧದ ನಡುವೆಯೂ ಸಿಪಿಎಂ ಮಂಗಳೂರಿನಲ್ಲಿ ಆಯೋಜಿಸಿದ್ದ ಸೌಹಾರ್ದ ರ್ಯಾಲಿಯಲ್ಲಿ ಭಾಗಿಯಾಗಿದ್ದ ಹಿರಿಯ ಎಡಪಂಥೀಯ ನಾಯಕ ಮತ್ತು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದವರಿಗೆ ರೂ.1 ಕೋಟಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.

ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿತ್ತು. ಹೇಳಿಕೆ ಸಂಬಂಧ ಕುಂದನ್ ಚಂದ್ರಾವತ್ ಅವರನ್ನು ಉಜ್ಜಯಿನಿ ಮಹಾನಾಗರ ಸಹ-ಪ್ರಚಾರಕ ಸ್ಥಾನದಿಂದ ಆರ್’ಎಸ್ಎಸ್ ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಚಂದ್ರಾವತ್ ವಿರುದ್ಧ ಮಾದವ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಚಂದ್ರಾವತ್ ಅವರ ವಿರುದ್ಧ ಐಪಿಸಿ ಸೆಕ್ಷನ್ 5051 (ಬಿ) ಅಡಿಯಲ್ಲಿ (ಭಯ, ಸಾರ್ವಜನಿಕರಿಗೆ ಎಚ್ಚರಿಕೆ, ರಾಜ್ಯದ ವಿರುದ್ದ ಅಪರಾಧ, ಸಾರ್ವಜನಿಕರ ಪ್ರಶಾಂತತೆಗೆ ಧಕ್ಕೆ) ಪ್ರಕರಣ ದಾಖಲಾಗಿದೆ.

No Comments

Leave A Comment