Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಸೌರಬೇಲಿ ವನ್ಯಜೀವಿಗಳಿಗೆ ಕಂಟಕ ಬಿಆರ್‌ಟಿ: 6 ಜಿಂಕೆ ಅನುಮಾನಾಸ್ಪದ ಸಾವು

ಚಾಮರಾಜನಗರ: ನಾಗರಹೊಳೆಯಲ್ಲಿ 12 ವನ್ಯಜೀವಿಗಳು ಮೃತಪಟ್ಟ ಘಟನೆ ಹಸಿರಾಗಿರುವಾಗಲೇ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ(ಬಿಆರ್‌ಟಿ) ವ್ಯಾಪ್ತಿಯಲ್ಲೂ 6 ಕಾಡುಪ್ರಾಣಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.

ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳು ಗ್ರಾಮದ ಬಳಿಯ ಖಾಸಗಿ ಜಮೀನಿನಲ್ಲಿ 3 ಕಡವೆ ಮತ್ತು 3 ಚುಕ್ಕಿಜಿಂಕೆಗಳು ಮೃತಪಟ್ಟಿವೆ.

ಪ್ರಾಣಿಗಳು ವಿಷ ಸೇವಿಸಿದರೆ ಮೂಗಿನಲ್ಲಿ ತೀವ್ರ ರಕ್ತಸ್ರಾವವಾಗುತ್ತದೆ. ಅಸುನೀಗಿರುವ ಕಡವೆ, ಜಿಂಕೆಗಳ ಮೂಗಿನಲ್ಲಿ ರಕ್ತಸ್ರಾವವಾಗಿದೆ. ನೀರಿನಲ್ಲಿ ವಿಷ ಮಿಶ್ರಣ ಅಥವಾ ಹಾನಿಕಾರಕ ಕೀಟನಾಶಕ ಸಿಂಪಡಿಸಿರುವ ಬೆಳೆಗಳನ್ನು ತಿಂದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಜಿಂಕೆಗಳ ಕಳೇಬರ ಪತ್ತೆಯಾಗಿರುವ ಜಮೀನು ರಕ್ಷಿತಾರಣ್ಯದ ಗಡಿಯಿಂದ 200 ಮೀ. ದೂರದಲ್ಲಿದೆ. ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿಗೆ ತೆರಳಿದ್ದ ವೇಳೆ 50 ಮೀ. ಸುತ್ತಳತೆಯಲ್ಲಿ ಜಿಂಕೆಗಳ ಮೃತದೇಹ ಬಿದ್ದಿರುವುದು ಕಂಡುಬಂದಿದೆ. ಕೂಡಲೇ, ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿದ್ದಾರೆ.

ಸ್ಥಳಕ್ಕೆ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಡಾ.ಆರ್‌. ರಮೇಶ್‌ಕುಮಾರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ ಮತ್ತು ಕೆ. ಗುಡಿಯ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ ಭೇಟಿ ನೀಡಿ ಪರಿಶೀಲಿಸಿದರು.

‘ರಕ್ಷಿತಾರಣ್ಯದಲ್ಲಿರುವ ಕೆರೆ–ಕಟ್ಟೆಗಳಲ್ಲಿ ನೀರಿಲ್ಲ. ವನ್ಯಜೀವಿಗಳು ಕಾಡಂಚಿನ ಜಮೀನುಗಳಿಗೆ ನೀರು ಅರಸಿ ಬರುವುದು ಸಹಜ. ಈ ವೇಳೆ ವಿಷಪ್ರಾಶನ ಮಾಡಿ ಕೊಲ್ಲುವ ಸಾಧ್ಯತೆಯೂ ಇರುತ್ತದೆ. ಜಿಂಕೆಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಲಿದೆ. ಜಿಂಕೆಗಳ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ರಮೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವನ್ಯಜೀವಿಗಳಿಗೆ ಕಂಟಕ: ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಅಂಚಿನಲ್ಲಿರುವ ಹೊಂಡರಬಾಳು, ನಲ್ಲೂರು, ಜ್ಯೋತಿಗೌಡನಪುರ, ಅಮೃತಭೂಮಿಯ ವ್ಯಾಪ್ತಿ ಕೃಷ್ಣಮೃಗಗಳು ಇವೆ. ಈ ಭಾಗದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚು.

ಕೆಲವು ಮಾಲೀಕರು ತಮ್ಮ ಹೊಲದ ಸುತ್ತಲೂ ಸೌರಬೇಲಿ ಅಳವಡಿಸಿಕೊಂಡಿಲ್ಲ. ಫಸಲು ಉಳಿಸಿಕೊಳ್ಳಲು ಜಮೀನಿನ ಸುತ್ತಲೂ ತಂತಿ ಅಳವಡಿಸಿ ವಿದ್ಯುತ್‌ ಹರಿಸುತ್ತಾರೆ. ರಾತ್ರಿವೇಳೆ ಜಮೀನಿನತ್ತ ಬರುವ ಕೃಷ್ಣಮೃಗಗಳು, ಕಾಡುಹಂದಿಗಳು, ಚುಕ್ಕಿಜಿಂಕೆಗಳು ವಿದ್ಯುತ್‌ ಸ್ಪರ್ಶಿಸಿ ಜೀವ ಕಳೆದುಕೊಳ್ಳುತ್ತಿವೆ.

ಅನಧಿಕೃತವಾಗಿ ವಿದ್ಯುತ್‌ ತಂತಿ ಅಳವಡಿಕೆಗೆ ಸೆಸ್ಕ್‌ ಮತ್ತು ಅರಣ್ಯ ಇಲಾಖೆಯಿಂದ ಕಡಿವಾಣ ಹಾಕಿಲ್ಲ. ಕೂಡಲೇ, ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳ ಉಳಿವಿಗೆ ಮುಂದಾಗಬೇಕು ಎನ್ನುವುದು ಪರಿಸರವಾದಿಗಳ ಒತ್ತಾಯ.

No Comments

Leave A Comment